ಫೀಫಾ ವಿಶ್ವ ಕಪ್ 2018

ರಷ್ಯಾದಲ್ಲಿ ಫಿಫಾ ವಿಶ್ವಕಪ್ ಗೆ ಅದ್ಧೂರಿ ಚಾಲನೆ

Lingaraj Badiger
ಮಾಸ್ಕೋ: ರಷ್ಯಾದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ  21ನೇ ಫಿಫಾ ಫುಟ್ ಬಾಲ್ ವಿಶ್ವಕಪ್ ಟೂರ್ನಿಗೆ ಗುರುವಾರ ಅದ್ಧೂರಿ ಚಾಲನೆ ಸಿಕ್ಕಿದೆ.
ಇಂದು ರಾತ್ರಿ 8.30ರ ಸುಮಾರಿಗೆ ಮಾಸ್ಕೊದ ಲುಜ್ನಿಕಿ ಕ್ರೀಡಾಂಗಣದಲ್ಲಿ 80 ಸಾವಿರ ಜನರ ಸಮ್ಮುುಖದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಧಿಕೃತವಾಗಿ ಫಿಫಾ ವಿಶ್ವಕಪ್ ಗೆ ಚಾಲನೆ ನೀಡಿದರು. 
ವಿಶ್ವದ ಅತ್ಯಂತ ಮಹತ್ವದ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ನನ್ನ ಶುಭಾಶಯಗಳು ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾದ ಖ್ಯಾತ ರೂಪದರ್ಶಿ ನಥಾಲಿಯಾ ಅವರೊಂದಿಗೆ 2010ರ ಫಿಫಾ ವಿಶ್ವಕಪ್‌ ವಿಜೇತ ಸ್ಪೇನ್‌ ತಂಡದ ನಾಯಕ ಐಕರ್‌ ಕ್ಯಾಸಿಲಾಸ್‌ ವಿಶ್ವಕಪ್‌ ಟ್ರೋಫಿಯನ್ನು ಕ್ರೀಡಾಂಗಣಕ್ಕೆ ತಂದು ಪ್ರೇಕ್ಷಕರಿಗೆ ಪ್ರದರ್ಶಿಸಿದರು. 
ನಂತರ ಬ್ರಿಟಿಷ್ ಪಾಪ್ ಸ್ಟಾರ್ ರಾಬಿ ವಿಲಿಯಮ್ಸ್ ಮತ್ತು ರಷ್ಯಾನ್ ಸೊಪ್ರಾನೊ ಐಡಾ ಅವರು ಸುಮಾರು 80,000 ಅಭಿಮಾನಿಗಳಿರುವ ಫುಟ್ಬಾಲ್ ಅರೆನಾದಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಫುಟ್ ಬಾಲ್ ಅಭಿಮಾನಿಗಳನ್ನು ರಂಜಿಸಿದರು.
ಮೊದಲ ಪಂದ್ಯದಲ್ಲಿ ಅತಿಥೇಯ ರಷ್ಯಾ, ಸೌದಿ ಅರೇಬಿಯಾವನ್ನು ಎದುರಿಸುತ್ತಿದ್ದು, ಒಟ್ಟು 32 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. 
ಫಿಫಾ ವಿಶ್ವಕಪ್ ಪಂದ್ಯಗಳು ರಷ್ಯಾದ ಮಾಸ್ಕೋ, ಕಜನ್, ಸಮರ, ಸೇಂಟ್ ಪಿಟರ್ಸ್‌ಬರ್ಗ್ ಸೇರಿದಂತೆ ಒಟ್ಟು 16 ಕ್ರೀಡಾಂಗಣದಲ್ಲಿ ನಡೆಯಲಿದ್ದು, ಜುಲೈ 15 ರಂದು ಫೈನಲ್ ಪಂದ್ಯ ನಡೆಯಲಿದೆ.
SCROLL FOR NEXT