ಆಸ್ಟ್ರೇಲಿಯಾ ವಿರುದ್ಧ ಫ್ರಾನ್ಸ್ ಗೆ ಜಯ 
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದ ಗೋಲ್ ನಿಂದ ಕಾಂಗರೂಗಳ ವಿರುದ್ದ ರೋಚಕ ಜಯ ಸಾಧಿಸಿದ ಫ್ರಾನ್ಸ್

ಫೀಫಾ ವಿಶ್ವಕಪ್ ಟೂರ್ನಿಯ ಪ್ರಬಲ ತಂಡಗಳಲ್ಲಿ ಒಂದಾದ ಫ್ರಾನ್ಸ್ ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 2-1 ಗೋಲ್ ಅಂತರದ ಜಯ ಸಾಧಿಸಿದೆ.

ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯ ಪ್ರಬಲ ತಂಡಗಳಲ್ಲಿ ಒಂದಾದ ಫ್ರಾನ್ಸ್ ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 2-1 ಗೋಲ್ ಅಂತರದ ಜಯ ಸಾಧಿಸಿದೆ.
ಶುನಿವಾರ ರಾತ್ರಿ ರಷ್ಯಾದ ಕಜಾನ್ ನಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ ಆಸ್ಟ್ರೇಲಿಯಾ ತಂಡವನ್ನು 2–1 ಗೋಲುಗಳಿಂದ ಫ್ರಾನ್ಸ್‌ ತಂಡ ಮಣಿಸಿದೆ. ಆ ಮೂಲಕ ಟೂರ್ನಿಯಲ್ಲಿ ಶುಭರಂಭ ಮಾಡಿದೆ.
ಪಂದ್ಯ ಆರಂಭವಾದ ಬರೊಬ್ಬರಿ 58 ನಿಮಿಷದವರೆಗೂ ಉಭಯ ತಂಡಗಳು ಗೋಲ್ ಗಾಗಿ ಹರಸಾಹಸ ಪಟ್ಟವು. ಆದರೆ 58ನೇ ನಿಮಿಷದಲ್ಲಿ ಫ್ರಾನ್ಸ್ ಪರ ಆ್ಯಂಟೋಯ್ನ್‌ ಗ್ರೀಜ್‌ಮನ್‌ ಗೋಲು  ಗಳಿಸುವ ಮೂಲಕ ಮುನ್ನಡೆ ತಂದುಕೊಟ್ಟರು. ಚೆಂಡಿನ ಮೇಲೆ ಹಿಡಿತ ಸಾಧಿಸುವ ಪೈಪೋಟಿಯ ನಡುವೆ ಪೆನಾಲ್ಟಿ ಬಾಕ್ಸ್ ಬಳಿ ಆಸ್ಟ್ರೇಲಿಯಾದ ಜೋಶ್‌ ರಿಸ್ಡನ್‌ ಅವರು ಆ್ಯಂಟೋಯ್ನ್‌ ಅವರನ್ನು ನೆಲಕ್ಕೆ ಬೀಳಿಸಿದರು. ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡ ಫ್ರಾನ್ಸ್‌ ಮುನ್ನಡೆ ಸಾಧಿಸಿತು. 
ಆದರೆ ಫ್ರಾನ್ಸ್ ನ ಸಂಭ್ರಮ ಕೇವಲ 4 ನಿಮಿಷಗಳಿಗೇ ಸೀಮಿತವಾಗಿತ್ತು. ಏಕೆಂದರೆ 62ನೇ ನಿಮಿಷದಲ್ಲಿ ತಿರುಗೇಟು ನೀಡಿದ ಆಸ್ಟ್ರೇಲಿಯಾದ ಮೈಲ್ ಜೆಡಿನಾಂಕ್ ಪ್ರತಿ ಗೋಲು ಗಳಿಸಿ ತಂಡ ಸಮಬಲ ಸಾಧಿಸಲು ನೆರವಾದರು. ಸ್ಯಾಮ್ಯುಯೆಲ್‌ ಉಮೆಟಿ ನೀಡಿದ ಪಾಸ್‌ನಲ್ಲಿ ನಿರಾಯಾಸವಾಗಿ ಗೋಲು ಗಳಿಸಿದ ಜೆಡಿನಾಂಕ್‌ ಆಸ್ಟ್ರೇಲಿಯಾದ ಪಾಳಯದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು. ನಂತರ ಉಭಯ ತಂಡಗಳ ಆಕ್ರಮಣ ಬಿರುಸು ಪಡೆಯಿತು. ಬಹುತೇಕ ಪಂದ್ಯ ಡ್ರಾದತ್ತ ಸಾಗುತ್ತಿದೆ ಎನ್ನುವಾಗಲೇ 80ನೇ ನಿಮಿಷದಲ್ಲಿ ಫ್ರಾನ್ಸ್ ನ ಪಾಲ್‌ ಪೊಗ್ಬಾ ಸುಲಭವಾಗಿ ಗೋಲ್ ಗಳಿಸಿ ಫ್ರಾನ್ಸ್  ಗೆಲುವಿಗೆ ಕಾರಣರಾದರು.
ಇಡೀ ಪಂದ್ಯದಲ್ಲಿ ಆಸ್ಟ್ರೇಲಿಯೋ ಸೋತಿತಾದರೂ, ಪ್ರಬಲ ಪ್ರಾನ್ಸ್ ತೀವ್ರ ಪೈಪೋಟಿ ನೀಡುವ ಮೂಲಕ ಗಮನ ಸೆಳೆಯಿತು. ಪ್ರಮುಖವಾಗಿ ಪಂದ್ಯದ ಆರಂಭದಿಂದಲೇ ಬಲಿಷ್ಠ ರಕ್ಷಣಾ ಗೋಡೆ ನಿರ್ಮಿಸಿದ ಆಸ್ಟ್ರೇಲಿಯಾ ತಂಡ ಎದುರಾಳಿಗಳನ್ನು ದಂಗು ಬಡಿಸಿತು. ಗೋಲು ಗಳಿಸಲು ನಡೆಸಿದ ಪ್ರಯತ್ನಗಳು ನಿರಂತರ ವಿಫಲಗೊಂಡಾಗ ಫ್ರಾನ್ಸ್ ಆಟಗಾರರು ಒತ್ತಡಕ್ಕೆ ಒಳಗಾದರು. ಗಾಯದ ಮೇಲೆ ಬರೆ ಎಳೆದಂತೆ ಒಲಿವಿಯರ್ ಗಿರೌಡ್‌ ತಲೆಗೆ ಪೆಟ್ಟು ಬಿತ್ತು. ಅದರಿಂದಾಗಿ ಅವರು ವಿಶ್ರಾಂತಿಗೆ ತೆರಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ