ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫೀಫಾ ವಿಶ್ವ ಕಪ್ 2018

ನಂಬರ್ 1 ಯಾರು? ಲಿಯೋನಲ್ ಮೆಸ್ಸಿ ಹೇಳಿದ್ದೇನು ಗೊತ್ತಾ?

ರಷ್ಯಾದಲ್ಲಿ ಫೀಫಾ ವಿಶ್ವಕಪ್ ಟೂರ್ನಿ ಆರಂಭವಾದಂತೆಯೇ ಇತ್ತ ಫುಟ್ಬಾಲ್ ವಲಯದಲ್ಲಿ ಮತ್ತೆ ನಂಬರ್ ಫುಟ್ಬಾಲ್ ಆಟಗಾರ ಯಾರು ಎಂಬ ವಿಚಾರದ ಕುರಿತು ಭಾರಿ ಚರ್ಚೆಗಳು ಏಳುತ್ತಿವೆ.

ಸಂಗ್ರಹ ಚಿತ್ರ
Srinivasa Murthy VN
Updated On : 24 Jun 2018, 10:51 am
ಮಾಸ್ಕೋ: ರಷ್ಯಾದಲ್ಲಿ ಫೀಫಾ ವಿಶ್ವಕಪ್ ಟೂರ್ನಿ ಆರಂಭವಾದಂತೆಯೇ ಇತ್ತ ಫುಟ್ಬಾಲ್ ವಲಯದಲ್ಲಿ ಮತ್ತೆ ನಂಬರ್ ಫುಟ್ಬಾಲ್ ಆಟಗಾರ ಯಾರು ಎಂಬ ವಿಚಾರದ ಕುರಿತು ಭಾರಿ ಚರ್ಚೆಗಳು ಏಳುತ್ತಿವೆ.
ಏತನ್ಮಧ್ಯೆ ಫುಟ್ಬಾಲ್ ಕ್ಷೇತ್ರದ ಅತ್ಯುತ್ತಮ ಆಟಗಾರ ಯಾರು ಎಂಬ ವಿಚಾರದ ಅರ್ಜೆಂಟೀನಾ ತಂಡದ ಪ್ರಮುಖ ಆಟಗಾರ ಲಿಯೋನಲ್ ಮೆಸ್ಸಿ ಹೇಳಿರುವು ಅಂಶಗಳು ಇದೀಗ ಸಾಮಾಜಿಕ ಜಾಲತಾಣಗಳ್ಲಿ ಭಾರಿ ವೈರಲ್ ಆಗುತ್ತಿದೆ. ಈ ಸಂದರ್ಶನ 2017ರ ಜೂನ್ ತಿಂಗಳನಿದ್ದೇ ಆದರೂ ಫೀಫಾ ವಿಶ್ವಕಪ್ ಫುಟ್ಬಾಲ್ ನಿಮಿತ್ತ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕ್ಕೂ ಯಾರು ನಂಬರ್ 1, ಮೆಸ್ಸಿ ಹೇಳಿದ್ದೇನು?

Advertisement

Advertisement

ವಿಡಿಯೋದಲ್ಲಿರುವಂತೆ ಸಂದರ್ಶಕನ ಪ್ರಶ್ನೆಗೆ ಉತ್ತರಿಸಿರುವ ಮೆಸ್ಸಿ, ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೋ ರೊನಾಲ್ಡೋ ಎಂದು ಹೇಳಿದ್ದಾರೆ. ವಿಡಿಯೋದ ಉದ್ದಕ್ಕೂ ರೊನಾಲ್ಡೋ ಸಾಮರ್ಥ್ಯ ಮತ್ತು ಆಟದ ಶೈಲಿಯನ್ನು ಕೊಂಡಾಡಿರುವ ಮೆಸ್ಸಿ, ಅವರ ಸಾಧನೆಗಳ ಸಮೀಪಕ್ಕೂ ಮತ್ತೊಬ್ಬರು ಹೋಗಲು ಸಾಧ್ಯವಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.
'ನಾನು ಕಂಡಂತೆ ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರ. ಆತನ ಫುಟ್ ವರ್ಕ್, ಶೈಲಿ, ಮತ್ತು ಗೋಲ್ ಬಾರಿಸುವ ರೀತಿ ಅಚ್ಚರಿಯಾಗುತ್ತದೆ. ಭವಿಷ್ಯದ ಫುಟ್ಬಾಲಿಗರಿಗೆ ರೊನಾಲ್ಡೋ ಖಂಡಿತಾ ಮಾದರಿ ಆಟಗಾರ. ಪ್ರಮುಖವಾಗಿ ಆತನ ಚಾಕಚಕ್ಯತೆ, ಚೆಂಡು ಎದುರಾಳಿಗಳಿಗೆ ಸಿಗದಂತೆ ಕೊಂಡೊಯ್ಯುವ ಗೇಮ್ ಪ್ಲಾನ್ ಅದ್ಭುತವಾಗಿರುತ್ತದೆ. ಈ ಹಿಂಗೆ ಬಲ್ಗೇರಿಯಾ ತಂಡದ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೋ ಮಾಡಿದ್ದ ಹೆಡ್ ಶಾಟ್ ನಿಜಕ್ಕೂ ನನ್ನ ಅಚ್ಚರಿಗೆ ಕಾರಣವಾಗಿತ್ತು.
ಸಾಮಾನ್ಯವಾಗಿ ಚೆಂಡು ಹೋದಂತೆ ಅದಕ್ಕೆ ಸರಿಸಮಾನವಾಗಿ ಫುಟ್ಬಾಲಿಗರು ಕಾಲ್ಚಲನೆ ಮಾಡುತ್ತಾರೆ. ಆದರೆ ರೊನಾಲ್ಡೋ ತಮ್ಮ ಕಾಲ್ಚಲನೆಗೆ ತಕ್ಕಂತೆ ಚೆಂಡನ್ನೇ ಹಿಡಿತಕ್ಕೆ ಪಡೆಯುತ್ತಾರೆ. ಅವರಂತಹ ಅದ್ಬುತ ಆಟಗಾರರನ್ನು ನಾನು ನೋಡಿಲ್ಲ ಎಂದು ಮೆಸ್ಸಿ ವಿಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನು ಫುಟ್ಬಾಲ್ ರಂಗದಲ್ಲಿ ಅರ್ಜೆಂಟೀನಾ ತಂಡದ ಲಿಯೋನಲ್ ಮೆಸ್ಸಿ ಮತ್ತು ಪೋರ್ಚುಗಲ್ ತಂಡದ ರೊನಾಲ್ಡೋ ಬದ್ಧ ಎದುರಾಳಿಗಳು ಎಂದೇ ಭಾವಿಸಲಾಗುತ್ತದೆ. ಈ ಇಬ್ಬರು ಪರಸ್ಪರ ಎದುರಾದರೆ ಮದಗಜಗಳು ಕಾದಾಡಿದಂತೆ ಪಂದ್ಯ ಕೂಡ ತೀವ್ರ ಕುತೂಹಲದಿಂದ ಕೂಡಿರುತ್ತದೆ. ಆದರೆ ಮೈದಾನದಲ್ಲಿ ಎಷ್ಟೇ ವಿರೋಧಿಗಳಾದರೂ ಮೈದಾನದಿಂದ ಹೊರಗೆ ಮೆಸ್ಸಿ ಮತ್ತು ರೊನಾಲ್ಡೋ ಆಪ್ತ ಸ್ನೇಹಿತರು ಎಂಬುದಕ್ಕೆ ಮೆಸ್ಸಿ ಸಂದರ್ಶನವೇ ಸಾಕ್ಷಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement