ಫಿಫಾ ವಿಶ್ವಕಪ್ 2014

ಪ್ರಿಕ್ವಾರ್ಟರ್‌ಗೆ ಕೋಸ್ಟ

ರೇಸಿಫ್: ಮತ್ತೊಂದು ಸೊಗಸಾದ ಆಟದ ಪ್ರದರ್ಶನ ನೀಡಿದ ಕೋಸ್ಟ ರಿಕಾ ತಂಡದ ಆಟಗಾರರು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸತತ ಎರಡನೇ ಜಯಭೇರಿ ಬಾರಿಸುವ ಮೂಲಕ 'ಡಿ' ಗುಂಪಿನಿಂದ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಎರೆನಾ ಪೆರ್ನಾಂಬುಕೊ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೋಸ್ಟ ರಿಕಾ ತಂಡ ಏಕೈಕ ಗೋಲಿನಿಂದ ಪ್ರಬಲ ಇಟಲಿ ತಂಡವನ್ನು ಪರಾಭವಗೊಳಿಸಿತು.
 ಪಂದ್ಯದ 44ನೇ ನಿಮಿಷದಲ್ಲಿ ನಾಯಕ ಬ್ರಯಾನ್ ರ್ಯೂಜ್ ಆಕರ್ಷಕ ಗೋಲು ಬಾರಿಸಿ ಕೋಸ್ಟ ರಿಕಾ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎದುರಾಳಿ ರಕ್ಷಣಾ ಆಟಗಾರರ ಕಣ್ತಪ್ಪಿಸಿ ಜೂನಿಯರ್ ಡಯಾಜ್ ಚೆಂಡನ್ನು ರಭಸವಾಗಿ ಒದ್ದರು. ಆಗ ಗೋಲುಬಲೆಯ ಸಮೀಪ ಹೊಂಚು ಹಾಕುತ್ತಿದ್ದ ಮುನ್ಪಡೆ ಆಟಗಾರ ಬ್ರಯಾನ್ ರ್ಯೂಜ್ ಅವರು ಚೆಂಡನ್ನು ಹೆಡ್ ಮಾಡುವ ಮೂಲಕ ಇಟಲಿ ಗೋಲ್‌ಕೀಪರ್ ಜಿಯಾನ್‌ಲುಜಿ ಬಫನ್‌ರನ್ನು ವಂಚಿಸಿ ಗುರಿ ಸೇರಿಸುವ ಮೂಲಕ ಕೋಸ್ಟ ರಿಕಾಕ್ಕೆ ವಿರಾಮದ ವೇಳೆಗೆ 1-0 ಗೋಲಿನ ಮುನ್ನಡೆ ದೊರಕಿಸಿಕೊಟ್ಟರು.
ಇನ್ನು ಉತ್ತರಾರ್ಧದ ಆಟದಲ್ಲಿ ಇಟಲಿ ಆಟಗಾರರು ಗೋಲು ಗಳಿಸಿ ಎದುರಾಳಿ ಜೊತೆ ಸಮಗೌರವ ಸಾಧಿಸಲು ಸಾಕಷ್ಟು ಶ್ರಮಿಸಿದರಾದರೂ ನಿರೀಕ್ಷಿತ ಫಲ ಕಾಣುವಲ್ಲಿ ವಿಫಲರಾದರು. ಪ್ರಮುಖವಾಗಿ ಕೋಸ್ಟ ರಿಕಾದ ರಕ್ಷಣಾ ಗೋಡೆಯನ್ನು ಭೇದಿಸಿ ಗುರಿ ಸೇರುವಲ್ಲಿ ಇಟಲಿ ಆಟಗಾರರು ಹಿನ್ನಡೆ ಅನುಭವಿಸಿದರು.
ತನ್ನ ಮೊದಲ ಪಂದ್ಯದಲ್ಲಿ 2 ಬಾರಿಯ ಚಾಂಪಿಯನ್ ಉರುಗ್ವೆ ತಂಡಕ್ಕೆ 3-1ರಿಂದ ಆಘಾತ ನೀಡಿದ್ದ ಕೋಸ್ಟ ರಿಕಾ ಈಗ ನಾಲ್ಕು ಬಾರಿಯ ಚಾಂಪಿಯನ್ ಇಟಲಿ ತಂಡಕ್ಕೂ ಅಚ್ಚರಿಯ ಸೋಲುಣಿಸಿ ಹದಿನಾರರಘಟ್ಟಕ್ಕೆ ಅರ್ಹತೆ ಪಡೆದುಕೊಂಡಿತು.
ಮತ್ತೊಂದೆಡೆ ಇಟಲಿ ತಂಡ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳಿಂದ ಗೆದ್ದು ಭರ್ಜರಿ ಆರಂಭ ಪಡೆದಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಮುಂದಿನ ಹಾದಿ ಕಠಿಣವಾಗಿಸಿಕೊಂಡಿತು. ಪಂದ್ಯದಲ್ಲಿ ಪ್ರತಿಶತ 55ರಷ್ಟು ಹಿಡಿತ ಸಾಧಿಸಿದ್ದರೂ ಸಹ ಇಟಲಿಗೆ ಜಯ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಟಲಿ ತಂಡ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಬೇಕಾದರೆ, ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಜಯ ಸಾಧಿಸಲೇಬೇಕಾಗಿದೆ.
ಕೋಸ್ಟ ರಿಕಾ 'ಡಿ' ಗುಂಪಿನಿಂದ ನಾಕೌಟ್ ಪ್ರವೇಶಿಸಿದ ಮೊದಲ ತಂಡವಾಗಿದೆ. ಈ ಮಧ್ಯೆ ಕೋಸ್ಟ ರಿಕಾ ತಂಡ ಗೆಲವು ದಾಖಲಿಸಿದ ಹಿನ್ನೆಲೆಯಲ್ಲಿ ಇದೇ ಗುಂಪಿನ ಮತ್ತೊಂದು ಪ್ರಮುಖ ತಂಡ ಇಂಗ್ಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ