ಸ್ಪೆಷಲ್ ಚಾಕೋಲೇಟ್ ಐಸ್ ಕ್ರೀಂ
ಸ್ಪೆಷಲ್ ಚಾಕೋಲೇಟ್ ಐಸ್ ಕ್ರೀಂ ಮಾಡುವ ವಿಧಾನ...
ಪದಾರ್ಥಗಳು
- ಹಾಲು - ಅರ್ಧ ಲೀಟರ್
- ಕಾರ್ನ್ ಫ್ಲೋರ್ – 2 ಚಮಚ
- ಡ್ರಿಂಕಿಂಗ್ ಚಾಕೋಲೇಟ್ – 2 ಚಮಚ
- ಸಕ್ಕರೆ – ರುಚಿಗೆ ತಕ್ಕಷ್ಟು
- ಕೆನೆ ಹಾಲು – 3 ಚಮಚ
- ಇನ್ ಸ್ಟಂಟ್ ಕಾಫಿ – 1 ಚಮಚ
- ದ್ರಾಕ್ಷಿ – 1 ಚಮಚ
- ವಾಲ್ ನಟ್ – 1 ಚಮಚ
- ಗೋಡಂಬಿ ಚೂರು – 1 ಚಮಚ
- ಬಾದಾಮಿ – 1 ಚಮಚ
ಮಾಡುವ ವಿಧಾನ
- ಕೊಂಚ ಹಾಲಿನಲ್ಲಿ ಕಾನ್ ಫ್ಲೋರ್ ಕದಡಿ, ಉಳಿದ ಹಾಲನ್ನು ಸಣ್ಣ ಉರಿಯಲ್ಲಿ ಹತ್ತು ನಿಮಿಷ ಕುದಿಸಿ.
- ಡ್ರಿಂಕಿಂಗ್ ಚಾಕೋಲೇಟ್, ಇನ್ ಸ್ಟಂಟ್ ಕಾಫಿ, ಸಕ್ಕರೆ ಹಾಕಿ ಎರಡು ನಿಮಿಷ ಕುದಿಸಿ ಕೆಳಗಿಳಿಸಿ.
- ಆರಿದ ಮೇಲೆ ಚೆನ್ನಾಗಿ ಕಡೆದ ಹಾಲಿನ ಕೆನೆಯನ್ನು ಸೇರಿಸಿ ಮಿಕ್ಸರ್ ನಲ್ಲಿ ಐದು ನಿಮಿಷ ತಿರುಗಿಸಿ.
- ಆಮೇಲೆ ಗೋಡಂಬಿ, ವಾಲ್ ನಟ್, ಬಾದಾಮಿ, ದ್ರಾಕ್ಷಿ ಸೇರಿಸಿ ಮೂರು ಘಂಟೆ ಫ್ರೀಝರ್ ನಲ್ಲಿಟ್ಟು ತೆಗೆಯಬೇಕು. ಈ ಐಸ್ ಕ್ರೀಮ್ ಗೆ ಚಾಕ್ ಲೆಟ್ ಚಿಪ್ಸ್ ಸೇರಿಸಿದರೆ ತುಂಬಾ ರುಚಿಯಾಗಿರುತ್ತೆ.
- ಮಂಜುಳ. ವಿ.ಎನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.