ಗ್ರೇವಿ ಕೋಫ್ತಾ
ಗ್ರೇವಿ ಕೋಫ್ತಾ ಮಾಡುವ ವಿಧಾನ...
ಪದಾರ್ಥಗಳು
- ಮೈದಾಹಿಟ್ಟು- 100 ಗ್ರಾಂ
- ಸಣ್ಣ ರವೆ – 100 ಗ್ರಾಂ
- ಹುರುಳಿಕಾಯಿ – 100 ಗ್ರಾಂ
- ಕ್ಯಾರೆಟ್ – 100 ಗ್ರಾಂ
- ಕಾಲಿಫ್ಲವರ್ – 100 ಗ್ರಾಂ
- ಈರುಳ್ಳಿ – 4
- ಟೊಮೆಟೊ – 4
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಎಣ್ಣೆ – 100 ಗ್ರಾಂ
- ಉಪ್ಪು – ರುಚಿಗೆ ತಕ್ಕಂತೆ
- ಗರಂ ಮಸಾಲಾ – 1 ಚಮಚ
- ಹಸಿಮೆಣಸಿನಕಾಯಿ – 5
ಮಾಡುವ ವಿಧಾನ
- ಮೊದಲು ಈರುಳ್ಳಿ ಮತ್ತು ಟೊಮೆಟೊವನ್ನು ತೊಳೆದು ಸಣ್ಣ ಸಣ್ಣದಾಗಿ ಹೆಚ್ಚಿಕೊಳ್ಳು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಡಿ.
- ಎಣ್ಣೆ ಕಾದ ನಂತರ ಹೆಚ್ಚಿರುವ ಈರುಳ್ಳಿ ಹಾಗೂ ಟೊಮೆಟೊ, ಕೊತ್ತಂಬರಿ ಸೊಪ್ಪು, ಉಪ್ಪು, ಹಸಿಮೆಣಸಿಕಾಯಿ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.
- ನಂತರ ಒಂದು ಪಾತ್ರೆಗೆ ಹಾಕಿಡಿ. ಇದನ್ನು ಕುದಿಸುವ ಅಗತ್ಯವಿಲ್ಲ. ಇದನ್ನು ಗ್ರೇವಿ ಎಂದು ಕರೆಯುತ್ತೇವೆ.
- ಮಿಕ್ಕ ತರಕಾರಿಗಳನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ಹೆಚ್ಚಿಕೊಂಡು ಬೇಯಿಸಿ. ನಂತರ ರವೆ ಮತ್ತು ಮೈದಾವನ್ನು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ. ಅದಕ್ಕೆ ಗರಂಮಸಾಲ, ಬೇಯಿಸಿದ ತರಕಾರಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಉಂಡೆಗಳನ್ನಾಗಿ ಮಾಡಿಕೊಳ್ಳಿ.
- ನಂತರ ಉಂಡೆಗಳನ್ನು ಹಾಕಿ ಕರಿಯಿರಿ. ಕರಿದ ಉಂಡೆಗಳನ್ನು ಮಾಡಿಟ್ಟುಕೊಂಡಿರುವ ಗ್ರೇವಿಯಲ್ಲಿ ಹಾಕಿ. ತುಂಬಾ ಹೊತ್ತು ನೆನೆಸಬೇಡಿ.
- ಗರಿ ಗರಿ ಇರುವಾಗಲೇ ತಿಂದು ನೋಡಿ. ಇದನ್ನು ಚಪಾತಿಯ ಜೊತೆ ತಿಂದರೆ ತುಂಬಾ ರುಚಿಕರ.
- ಮಂಜುಳ.ವಿ.ಎನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.