ಹಣ್ಣುಗಳ ಕುಲ್ಫಿ
ಹಣ್ಣುಗಳ ಕುಲ್ಫಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಎಲ್ಲಾ ರೀತಿಯ ಹಣ್ಣುಗಳು
- ಹಾಲು- 2 ಲೋಟ
- ದ್ರಾಕ್ಷಿ - 2 ಚಮಚ
- ಗೋಡಂಬಿ- 2 ಚಮಚ
- ಬಾದಾಮಿ- ಸ್ವಲ್ಪ
- ಜೇನುತುಪ್ಪ- ಸಿಹಿಗೆ ತಕ್ಕಷ್ಟು
- ಕೇಸರಿ ದಳ- 8
- ಏಲಕ್ಕಿ ಪುಡಿ- 1 ಚಮಚ
ಮಾಡುವ ವಿಧಾನ
- ಹಣ್ಣುಗಳನ್ನೆಲ್ಲ ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು.
- ನಂತರ ಕತ್ತರಿಸಿದ ಹಣ್ಣುಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ ಏಲಕ್ಕೆ ಪುಡಿ ಸೇರಿಸಿ ಮತ್ತೆ ಕುದಿಸಿ. ಚೆನ್ನಾಗಿ ಕುದಿ ಬಂದ ನಂತರ ಅದನ್ನು ಕೆಳಗಿಳಿಸಿ.
- ಬಿಸಿ ಹಾಲನ್ನು ತಣ್ಣಗಾಗಿಸಿಕೊಂಡು ಆ ಹಾಲಿಗೆ ಈ ಮೊದಲೇ ತಯಾರಿಸಿಟ್ಟುಕೊಂಡ ಮಿಶ್ರ ಹಣ್ಣುಗಳ ಪೇಸ್ಟ್ ನ್ನು ಸಿಹಿಗೆ ತಕ್ಕಷ್ಟು ಜೇನುತುಪ್ಪ ಮತ್ತು ಸಣ್ಣದಾಗಿ ಕತ್ತರಿಸಿದ ದ್ರಾಕ್ಷಿ, ಗೋಡಂಬಿ, ಕೇಸರಿ ದಳ, ಬಾದಾಮಿಯ ಚೂರುಗಳನ್ನು ಸೇರಿಸಿ.
- ಈ ಮಿಶ್ರಣವನ್ನು ಕುಲ್ಫಿ ಮೌಲ್ಡ್ ನಲ್ಲಿರಿಸಿ 5 ರಿಂದ 6 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಟ್ಟರೆ ಬಾಯಿ ನೀರೂರಿಸುವ ಕುಲ್ಫಿ ಸವಿಯಲು ಸಿದ್ಧ.
-ಮಂಜುಳ.ವಿ.ಎನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.