ಮೊದಲು ಓವನನ್ನು 400ಫೆ ಪ್ರೀಹೀಟ್ ಮಾಡಿ. ನಂತರ ಗೆಣಸನ್ನು 1/2 ಇಂಚು ದಪ್ಪ ಇರುವಂತೆ ಕತ್ತರಿಸಿಕೊಳ್ಳಿ.
ಒಂದು ಬೌಲ್ ಗೆ ಎಣ್ಣೆ ಹಾಕಿ, ನಂತರ ಗೆಣಸಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿರಿ. ಮತ್ತೆ ಸಣ್ಣ ಬೌಲ್ ನಲ್ಲಿ ಬ್ರೌನ್ ಶುಗರ್, ಪೀಕಾನ್ಸ್, ಬೆಣ್ಣೆ, ಲವಂಗ ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಿ.
ನಂತರ ಎಣ್ಣೆ ಉಪ್ಪು ಮಿಶ್ರಿತ ಗೆಣಸನ್ನು ಬೇಕಿಂಗ್ ಟ್ರೇನಲ್ಲಿಟ್ಟು 25-30 ನಿಮಿಷ ಬೇಯಿಸಿ.
ನಂತರ ಅದನ್ನು ತೆಗೆದು ಸ್ವಲ್ಪ ಆರಿದ ಮೇಲೆ ಅದರ ಮೇಲೆ ಸಿದ್ಧಪಡಿಸಿರುವ ಬ್ರೌನ್ ಶುಗರ್ ಮಿಶ್ರಣವನ್ನು ಹರಡಿ ಮತ್ತೆ ಓವನ್ ನಲ್ಲಿಟ್ಟು ಸಕ್ಕರೆ ಕರಗುವವರೆಗೆ 10 ನಿಮಿಷ ಬೇಯಿಸಿ ಸ್ವೀಟ್ ಈಗ ಪೊಟಾಟೋ ಕ್ರೌನ್ ತಿನ್ನಲು ಸಿದ್ಧವಾಗುತ್ತದೆ.