ಮೊಸರು ವಡೆ
ಮೊಸರು ವಡೆ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಉದ್ದಿನ ಬೇಳೆ- 1 ಬಟ್ಟಲು
- ಮೊಸರು – ನಾಲ್ಕು ಬಟ್ಟಲು
- ಮೆಣಸಿನ ಪುಡಿ- 1 ಚಮಚ
- ಸಾಸಿವೆ- ಅರ್ಧ ಚಮಚ
- ಹಸಿಮೆಣಸಿನಕಾಯಿ – 3
- ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
- ಇಂಗು – ಸ್ವಲ್ಪ
- ಕರಿಬೇವು ಸೊಪ್ಪು – ಸ್ವಲ್ಪ
ಮಾಡುವ ವಿಧಾನ
- ಉದ್ದಿನ ಬೇಳೆಯನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆ ಹಾಕಿರಿ.
- ನಂತರ ಹಸಿಮೆಣಸಿನಕಾಯಿ, ಉಪ್ಪು, ಶುಂಠಿ ಬೆರೆಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
- ಈಗ ಎಣ್ಣೆಯನ್ನು ಕಾಯಿಸಿ ಉದ್ದಿನ ವಡೆಗಳನ್ನು ಹೊಂಬಣ್ಣದಂತೆ ಕರಿಯಿರಿ ನಂತರ ತೆಗೆದಿಡಿರಿ.
- ಮೊಸರು ಕಡೆದು ಕರಿದ ವಡೆಗಳನ್ನು ಅದರಲ್ಲಿ ಹಾಕಿ ನೆನೆಹಾಕಿರಿ. ಅರ್ಧ ಗಂಟೆ ನಂತರ ಅದರ ಮೇಲೆ ಉಪ್ಪು ಸಿಂಪಡಿಸಿ. ಒಂದು ಊಟದ ಚಮಚಯಷ್ಟು ಎಣ್ಣೆ ಸಾಸಿವೆ. ಇಂಗು ಮತ್ತು ಕರಿಬೇವು ಎಲೆಗಳನ್ನು ಹಾಕಿ ಒಗ್ಗರಣೆ ಮಾಡಿ ಅದನ್ನು ಮೊಸರು ವಡೆಗೆ ಬೆರೆಸಿ. ಈಗ ಮೊಸರು ವಡೆ ಸಿದ್ಧವಾಗುತ್ತದೆ.
-ಮಂಜುಳ.ವಿ.ಎನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.