ಬೇಕಾಗುವ ಪದಾರ್ಥಗಳು.ಅಕ್ಕಿ – 2 ಬಟ್ಟಲುಹುರಿಗಡಲೆ ಹಿಟ್ಟು – 1 ಬಟ್ಟಲುಗೋಧಿ ಹಿಟ್ಟು – 2 ಬಟ್ಟಲುಮೊಸರು – 3 ಬಟ್ಟಲುಅಡುಗೆ ಸೋಡ – 1 ಚಿಟಿಕೆತುಪ್ಪ/ಎಣ್ಣೆ – ಬೇಕಾದಷ್ಟುಉಪ್ಪು- ರುಚಿಗೆ ತಕ್ಕಷ್ಟು.ಮಾಡುವ ವಿಧಾನ.ಉಪ್ಪು ಬಿಟ್ಟು ಮಿಕ್ಕೆಲ್ಲಾ ಸಾಮಾನುಗಳನ್ನು ಮೊಸರಿನಲ್ಲಿ ಕಲಸಿ ಹದವಾಗಿ ದೋಸೆಯ ಹಿಟ್ಟಿನಂತೆ ಕಲಸಿಕೊಳ್ಳಬೇಕು.ನಂತರ ಅಗತ್ಯವಾದಷ್ಟು ನೀರು ಬೆರೆಸಿಕೊಳ್ಳಬೇಕು. ಕಲಸಿದ ಸುಮಾರು ಹನ್ನೆರಡು ಗಂಟೆಗಳ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿರಿ.ಈಗ ಕಾವಲಿಯನ್ನು ಕಾಯಲು ಒಲೆಯ ಮೇಲೆ ಇಡಿ. ನಂತರ ಕಾವಲಿಗೆ ತುಪ್ಪ ಅಥವಾ ಎಣ್ಣೆ ಹಾಕಿ ದೋಕಿ ಹಾಕಿರಿ.ದೋಸೆಯನ್ನು ಎರಡೂ ಭಾಗಗಳಲ್ಲೂ ಎಣ್ಣೆ ಅಥವಾ ತುಪ್ಪ ಹಾಕಿ ಚೆನ್ನಾಗಿ ಸುಡಬೇಕು. ಈಗ ರುಚಿಕರ ಗರಂಗರಂ ದೋಸೆ ತಿನ್ನಲು ಸಿದ್ಧ. ಕಾಯಿಚಟ್ನಿಯೊಂದಿಗೆ ತಿಂದರೆ ಬಲು ರುಚಿ..-ಮಂಜುಳ.ವಿ.ಎನ್.Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics