ಮೊಟ್ಟೆಯನ್ನು ಬಟ್ಟಲಿಗೆ ಹಾಕಿ. 1 ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕದಡಿ.
ಆಮ್ಲೆಟ್ ತಯಾರು ಮಾಡಿಕೊಳ್ಳಿ. ನಂತರ ಅದನ್ನು ಚಿಕ್ಕ-ಚಿಕ್ಕ ತುಂಟುಗಳಾಗಿ ಕತ್ತರಿಸಿಡಿ.
ಈಗ ಬಾಣಲೆ ಬಿಸಿ ಮಾಡಿ 2 ಚಮಚ ಎಣ್ಣೆ ಹಾಕಿ.
ಎಣ್ಣೆ ಕಾದ ನಂತರ ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
ನಂತರ ಈರುಳ್ಳಿ ಹಾಗೂ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ. ನಂತರ ಅರ್ಧ ಕಪ್ ಟೊಮೆಟೋ ಪೇಸ್ಟ್ ಹಾಕಿ 45 ನಿಮಿಷ ಕೈ ಆಡಿಸಿ ಬಿಸಿ ಮಾಡಿ.ನಂತರ ಜೀರಿಗೆ ಪುಡಿ, ದನಿಯಾ ಪುಡಿ, ಗರಂ ಮಸಾಲ. ಅರಿಶಿಣ ಪುಡಿ, ಖಾರದ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ.ನಂತರ ತೆಂಗಿನ ಹಾಲು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಟ್ಟಿ ಗ್ರೇವಿಯಾಗುವವರೆಗೆ ಕುದಿಸಿ.
ನಂತರ ಕತ್ತರಿಸಿಟ್ಟ ಆಮ್ಲೆಟ್ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಉರಿಯಿಂದ ಇಳಿಸಿದರೆ ಆಮ್ಲೆಟ್ ಗ್ರೇವಿ ರೆಡಿ.