ಪಡ್ಡು
ಪಡ್ಡು ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಇಡ್ಲಿ ಹಿಟ್ಟು- 2 ಕಪ್
- ಈರುಳ್ಳಿ- 2
- ದಪ್ಪ ಮೆಣಸಿನಕಾಯಿ-1
- ಹಸಿ ಮೆಣಸಿನಕಾಯಿ- 3
- ಶುಂಠಿ- 1 ಇಂಚು
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಕರಿಬೇವಿನ ಎಲೆ
- ಉಪ್ಪು, ಅಡುಗೆ ಎಣ್ಣೆ
ಪಡ್ಡು ಮಾಡುವ ವಿಧಾನ
- ಇಡ್ಲಿ ಹಿಟ್ಟು ಹುದುಗು ಬರಲು ಬಿಡಿ
- ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ದಪ್ಪ ಮೆಣಸಿನಕಾಯಿ, ಹಸಿರು ಮೆಣಸಿನ ಕಾಯಿ, ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು, ಶುಂಠಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ಅದಕ್ಕೆ ಚಿಟಿಕೆ ಅಡುಗೆ ಸೋಡಾ, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ.
- ನಂತರ ಸ್ಟವ್ ಹಚ್ಚಿ ಪಡ್ಡು ಮಾಡುವ ಕಾವಲಿಯನ್ನು ಸ್ಟವ್ ಮೇಲಿಟ್ಟು ಕಾಯಿಸಿ. ನಂತರ ಅದರ ತೂತುಗಳಿಗೆ ಒಂದೊಂದು ಚಮಚ ಎಣ್ಣೆ ಹಾಕಿ.
- ನಂತರ ಎಣ್ಣೆ ಹಚ್ಚಿದ ಪಡ್ಡು ಕಾವಲಿಗೆ ಮುಕ್ಕಾಲು ಬರುವ ಹಾಗೆ ಕಲೆಸಿಕೊಂಡ ಹಿಟ್ಟನ್ನು ಹಾಕಿ ಬೇಯಿಸಿ. ಎರಡು ಸ್ಪೂನ್ ತೆಗೆದುಕೊಂಡು ಮೇಲಿನಿಂದ ಕೆಳಗೆ ತಿರುವಿ ಹಾಕಿ ಮತ್ತೆ ಬೇಯಿಸಿ.
- ಬಿಸಿಯಾಗಿರುವಾಗಲೇ ತೆಂಗಿನ ಕಾಯಿ ಚಟ್ನಿಯ ಜೊತೆ ತಿನ್ನಿರಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.