ಒಲೆಯ ಮೇಲೆ ಬಾಣಲೆ ಇಟ್ಟು ಸ್ವಲ್ಪ ಬೆಣ್ಣೆ ಹಾಕಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿದುಕೊಳ್ಳಬೇಕು. ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ದೊಡ್ಡ ಮೆಣಸಿನ ಕಾಯಿ ಹಾಕಿ ಹುರಿಯಬೇಕು. ಸ್ವಲ್ಪ ಹೊತ್ತಾದ ಮೇಲೆ ಟೊಮೆಟೋವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
ನಂತರ ಇದಕ್ಕೆ ಖಾರದ ಪುಡಿ, ಪಾವ್ ಬಾಜಿ ಮಸಾಲ, ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಟ್ಟಿಯಾಗುವವರೆಗೆ ಬಿಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಬೇಕು.
ಒಲೆಯ ಮೇಲೆ ತವಾ ಇಟ್ಟು ಇದಕ್ಕೆ ಸ್ವಲ್ಪ ಬೆಣ್ಣೆ ಹಾಕಬೇಕು. ಬೆಣ್ಣೆ ಕರಗಿದ ನಂತರ ಪಾವ್ ಬನ್ ಕತ್ತರಿಸಿ ಚೆನ್ನಾಗಿ ರೋಸ್ಟ್ ಮಾಡಬೇಕು.
ಒಂದು ತಟ್ಟೆಗೆ ರೋಸ್ಚ್ ಮಾಡಿದ ಪಾವ್ ಬನ್ ಇಟ್ಟು, ಒಂದು ಬೌಲ್ ನಲ್ಲಿ ಬಾಜಿ ಹಾಕಿ ಅದರ ಮೇಲೆ ಸ್ವಲ್ಪ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ಪಾವ್ ಬಾಜಿ ತಿನ್ನಲು ಸಿದ್ದವಾಗುತ್ತದೆ.