ಉತ್ತರ ಕರ್ನಾಟಕ ಖಡಕ್ ಜೋಳದ ರೊಟ್ಟಿ
ಜೋಳದ ರೊಟ್ಟಿ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು:
- ಜೋಳದ ಹಿಟ್ಟು- 3 ಕಪ್
- ಎಳ್ಳು - 100 ಗ್ರಾಂ
- ರುಚಿಗೆ ತಕ್ಕಷ್ಟು ಉಪ್ಪು
- ಕೆಂಪು ಮೆಣಸಿನಕಾಯಿ ಪುಡಿ -ಸ್ವಲ್ಪ
- ಇಂಗು- ಸ್ವಲ್ಪ
- ಎಣ್ಣೆ 1 ಕಪ್
ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ಹಾಕಿ ಅದಕ್ಕೆ 1 ಕಪ್ ಬಿಸಿ ನೀರು ಹಾಕಿ ಅರ್ಧ ಗಂಟೆ ನೆನೆಯಲು ಬಿಡಿ.
- ಜೋಳದ ಹಿಟ್ಟಿಗೆ ಹುರಿದ ಎಳ್ಳು, ಸ್ವಲ್ಪ ಉಪ್ಪು, ಒಣಮೆಣಸಿನ ಪುಡಿ, ಸ್ವಲ್ಪ ಇಂಗು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
- ನಂತರ ಅದಕ್ಕೆ ಸ್ವಲ್ಪ ಎಣ್ಣೆ ಬೆರೆಸಿ ಸರಿಯಾಗಿ ನಾದಿಟ್ಟುಕೊಳ್ಳಿ.
- ಒಂದು ಗಂಟೆಯ ನಂತರ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಚಪಾತಿಯಂತೆ ರೊಟ್ಟಿಗಳನ್ನು ತಯಾರಿಸಿ.
- ಒಲೆಯ ಮೇಲೆ ತವಾ ಇಟ್ಟು ರೊಟ್ಟಿಯನ್ನು ಅದರ ಮೇಲೆ ಹಾಕಿ ಬೇಯಿಸಿ. ಎರಡೂ ಕಡೆ ಸರಿಯಾಗಿ ಬೇಯಿಸಿ.
- ತಯಾರಾದ ಬಿಸಿ ಬಿಸಿ ಜೋಳದ ರೊಟ್ಟಿಯನ್ನು ಎಣ್ಣೆಗಾಯಿ, ಚಟ್ನಿಪುಡಿ ಗುರೆಳ್ಳು, ಕುರೆಸಾಣಿ ಪುಡಿ, ಒಳ್ಳೆ ಎಳ್ಳೆಣ್ಣೆ ಜೊತೆ ಸವಿಯಿರಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.