ಬದನೆಕಾಯಿ ಎಣ್ಣೆಗಾಯಿ
ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಗುಂಡು ಬದನೆಕಾಯಿ - 10-15
- ತೆಂಗಿನಕಾಯಿ - ಅರ್ಧ ಹೋಳು
- ಚಕ್ಕೆ, ಲವಂಗ - ಸ್ವಲ್ಪ
- ಗಸಗಸೆ - ಸ್ವಲ್ಪ
- ಈರುಳ್ಳಿ - 2-3
- ಬೆಳ್ಳುಳ್ಳಿ - ಸ್ವಲ್ಪ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಟೊಮೆಟೋ - 2
- ಶುಂಠಿ - ಸ್ವಲ್ಪ
- ದನಿಯಾ ಪುಡಿ - 1 ಚಮಚ
- ಖಾರದ ಪುಡಿ - 2-3 ಚಮಚ
- ಹರಳಣ್ಣೆ - ಸ್ವಲ್ಪ
ಮಾಡುವ ವಿಧಾನ
- 2 ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು. ನಂತರ ತೆಂಗಿನಕಾಯಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಗಸಗಸೆ, ಚಕ್ಕೆ, ಲವಂಗ, ಎಲ್ಲವನ್ನೂ ರುಬ್ಬಿಕೊಳ್ಳಬೇಕು. ನಂತರ ಇದಕ್ಕೆ ಈರುಳ್ಳಿ, ಟೊಮೆಟೋ, ದನಿಯಾ ಪುಡಿ, ಖಾರದ ಪುಡಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಂಡರೆ ಮಸಾಲೆ ತಯಾರಾಗುತ್ತದೆ.
- ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಗುಂಡು ಬದನೆಕಾಯಿಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಬೇಕು.
- ಮತ್ತೊಂದು ಪಾತ್ರೆ ತೆಗೆದುಕೊಂಡು ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ, ಅರಿಶಿಣದ ಪುಡಿ, ಉಪ್ಪು ಹಾಗೂ ಹರಳೆಣ್ಣೆ 2 ಚಮಚ ಹಾಕಿ ಮಿಶ್ರಣ ಮಾಡಬೇಕು.
- ಈ ಮಸಾಲೆಯನ್ನು ಕತ್ತರಿಸಿಕೊಂಡ ಬದನೆಕಾಯಿಯೊಳಗೆ ತುಂಬಬೇಕು.
- ನಂತರ ಒಂದು ಪಾತ್ರೆತೆಗೆದುಕೊಂಡು ಒಲೆಯ ಮೇಲಿಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಿ. ಇದು ಕೆಂಪಾಗಾದ ನಂತರ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.
- ನಂತರ ಇದಕ್ಕೆ ಮಸಾಲೆ ತುಂಬಿದ ಬದನೆಕಾಯಿ ಹಾಗೂ ಉಳಿದ ಮಸಾಲೆಯನ್ನು ಹಾಕಿ. ಬೇಯಲು ಮಸಾಲೆ ಹಾಗೂ ಬದನೆಕಾಯಿ ಬೇಯಲು ಬೇಕಾಗುವಷ್ಟು ನೀರು ಹಾಕಿ ಅರ್ಧ ಗಂಟೆಗಳ ಕಾಲ ಬೇಯಲು ಬಿಟ್ಟರೆ ಬದನೆಕಾಯಿ ಎಣ್ಣೆಗಾಯಿ ತಿನ್ನಲು ಸಿದ್ದವಾಗುತ್ತದೆ.
-ಮಂಜುಳ.ವಿ.ಎನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.