ಸಾಮಗ್ರಿಗಳು
1. ತೊಗರಿಬೇಳೆ- 1 ಪಾವು
2. ದಂಟಿನ ಸೊಪ್ಪು- 6 ಸಣ್ಣಕಟ್ಟು, 1 ದೊಡ್ಡ ಕಟ್ಟು
3. ಎಣ್ಣೆ- 2 ಟೀ ಚಮಚ
4. ಸಾಸಿವೆ- 1 ಟೀ ಚಮಚ
5. ಕಡಲೆಬೇಳೆ- 2 ಟೀ ಚಮಚ
6. ಉದ್ದಿನಬೇಳೆ- 2 ಟೀ ಚಮಚ
7. ಹಸಿಮೆಣಸಿನಕಾಯಿ- 6(ಸೀಳಿ ಹಾಕಿ)
8. ಕೊತ್ತಂಬರಿಸೊಪ್ಪು- ರುಚಿಗೆ ತಕ್ಕಷ್ಟು
9. ಹುಣಸೆಹಣ್ಣು- 1 ನಿಂಬೆ ಗಾತ್ರ
10. ಸಾರಿನ ಪುಡಿ- 1 ಟೀ ಚಮಚ
11. ಉಪ್ಪು- 1 ಟೀ ಚಮಚ
12. ಇಂಗು, ಬೆಲ್ಲ- ಎರಡು ಸ್ವಲ್ಪ ಹಾಕಿ
ಮಾಡುವ ವಿಧಾನ
ದಂಡಿನ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಎಣ್ಣೆ ಕಾಯಿಸಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು ಹಾಕಿ ಒಗ್ಗರಣೆ ಮಾಡಿ. ಅದರಲ್ಲಿ ಸೊಪ್ಪನ್ನು 10-12 ನಿಮಿಷ ಬೇಯಿಸಿ. ಬೇಳೆಯನ್ನು ತೊಳೆದು, ನೀರು, ಚಿಟಿಕೆ ಸೋಡ, ಚಿಟಿಕೆ ಅರಿಶಿನ, 1/4 ಚಮಚ ಎಣ್ಣೆ ಹಾಕಿ ಬೇಯಿಸಿ. ಬೆಂದ ಬೇಳೆಯನ್ನು ಕಡೆದು ಅದಕ್ಕೆ ಬೆಂದ ಸೊಪ್ಪನ್ನು ಹಾಕಿ. ಹುಣಸೆರಸಕ್ಕೆ ಸಾರಿನ ಪುಡಿ, ಉಪ್ಪು, ಇಂಗು, ಬೆಲ್ಲ ಸೇರಿಸಿ ಅದನ್ನು ಕುದಿಯುತ್ತಿರುವ ಸೊಪ್ಪು ಮತ್ತು ಬೇಳೆಗೆ ಬೆರೆಸಿ ಚೆನ್ನಾಗಿ ಕುದಿಸಿ. ಇದನ್ನು ಅನ್ನದ ಜೊತೆ ಕಲಸಿ ಊಟ ಮಾಡುವಾಗ ನಿಂಬೆ ರಸ ಹಾಕಿಕೊಂಡರೆ ರುಚಿ ಹೆಚ್ಚುತ್ತದೆ.
- ಶ್ರೀದೇವಿ
(ಸಖಿ ಪಾಕ್ಷಿಕದಿಂದ ಆಯ್ದ ಲೇಖನ)