ಹಿತಕವರೆ ಬೇಳೆ ಹುಳಿ
ಸಾಮಗ್ರಿಗಳು
1. ಹಿತಕವರೆ- 1/2 ಪಾವು
2. ಉದ್ದಿನಬೇಳೆ- 1 ಟೀ ಚಮಚ
3. ಮೆಣಸು- 10-12
4. ಸಾರಿನ ಪುಡಿ- 1 ಟೀ ಚಮಚ
5. ತೆಂಗಿನಕಾಯಿ- 1 ಬಟ್ಟಲು
6. ಉಪ್ಪು, ಇಂಗು, ಕರಿಬೇವು, ಕೊತ್ತಂಬರಿಸೊಪ್ಪು- ರುಚಿಗೆ ತಕ್ಕಷ್ಟು
7. ಎಣ್ಣೆ- 1 1/2 ಟೀ ಚಮಚ
8. ಸಾಸಿವೆ- 1 ಟೀ ಚಮಚ
ಮಾಡುವ ವಿಧಾನ
- ಉದ್ದಿನಬೇಳೆಯನ್ನು ಘಂ ಅಂತ ಹುರಿಯಿರಿ. ಮೆಣಸನ್ನು ಪಟ ಪಟ ಎನ್ನುವವರೆಗೆ ಹುರಿಯಿರಿ. ಎರಡನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಸಾರಿನಪುಡಿ, ಕಾಯಿತುರಿ, ಉಪ್ಪು, ಇಂಗು ಎಲ್ಲವನ್ನು ಸ್ವಲ್ಪ ನೀರು ಹಾಕಿ ಚಟ್ನಿ ಹದಕ್ಕೆ ರುಬ್ಬಿ.
- ಒಂದು ಪಾತ್ರೆಯಲ್ಲಿ ಸ್ವಲ್ಪ ನೀರಿಟ್ಟು ಹಿತಕವರೆಯನ್ನು ಬೇಯಿಸಿ. 10 ನಿಮಿಷದಲ್ಲಿ ಬೆಂದು ಬಿಡುತ್ತದೆ.
- ರುಬ್ಬಿದ ಚಟ್ನಿಯನ್ನು ಬೆಂದ ಕಾಳಿಗೆ ಹಾಕಿ, ಹುಳಿಯ ಹದಕ್ಕೆ ಬರುವಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ.
- ಎಣ್ಣೆ ಕಾಯಿಸಿ, ಸಾಸಿವೆ, ಕರಿಬೇವು, ಕೊತ್ತಂಬರಿಸೊಪ್ಪು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಸೇರಿಸಿ.
- ಇದನ್ನು ಪೂರಿ, ಚಪಾತಿ ಜೊತೆ ತಿನ್ನಬೇಕು. ಅನ್ನಕ್ಕೂ ಕಲಸಿಕೊಳ್ಳಬಹುದು.
- ಶ್ರೀದೇವಿ
(ಸಖಿ ಪಾಕ್ಷಿಕದಿಂದ ಆಯ್ದ ಲೇಖನ)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.