ಸಾಮಗ್ರಿಗಳು
1. ಹಿತಕವರೆ- 1 ಪಾವು
2. ಉದ್ದಿನಬೇಳೆ- 1/4 ಟೀ. ಚಮಚ
3. ಉಪ್ಪು, ಇಂಗು, ಕರಿಬೇವು, ಕೊತ್ತಂಬರಿಸೊಪ್ಪು- ರುಚಿಗೆ ತಕ್ಕಷ್ಟು
4. ಎಣ್ಣೆ- 2 ಟೀ ಚಮಚ
5. ಸಾಸಿವೆ- 1/2 ಟೀ ಚಮಚ
6. ಕಡಲೆಬೇಳೆ- 1/4 ಟೀ ಚಮಚ
7. ಹಸಿಕೊಬ್ಬರಿ ತುರಿ- 1 ಹಿಡಿ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಸುಮಾರು ನೀರಿಟ್ಟು ಹಿತಕವರೆಯನ್ನು ಬೇಯಿಸಿ. 10-15 ನಿಮಿಷದಲ್ಲಿ ಬೆಂದು ಬಿಡುತ್ತದೆ. ಒಂದು ಬಾಂಡ್ಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಕೊತ್ತಂಬರಿಸೊಪ್ಪು, ಕರಿಬೇವು, ಇಂಗು ಹಾಕಿ ಒಗ್ಗರಣೆ ಮಾಡಿ ಬೆಂದ ಬೇಳೆಗೆ ಹಾಕಿ ಹಸಿಮೆಣಸಿನಕಾಯಿ ಕೂಡ ಹಾಕಿ. ಚೆನ್ನಾಗಿ ಕುದಿಯುತ್ತಿರುವಾಗ ಕೊಬ್ಬರಿ ತುರಿ, ಉಪ್ಪು ಹಾಕಿ ಮತ್ತೊಮ್ಮೆ ಕುದಿಸಿ. ಇದು ಸಾರಿನ ತರಹ ನೀರಾಗಿರಬಾರದು. ಸ್ವಲ್ಪ ಗಟ್ಟಿಯಾಗಿ ಇರಬೇಕು.
- ಶ್ರೀದೇವಿ
(ಸಖಿ ಪಾಕ್ಷಿಕದಿಂದ ಆಯ್ದ ಲೇಖನ)