ಸಾಮಗ್ರಿಗಳು:1. ಗೋಧಿ/ ಉಪ್ಪಿಟ್ಟಿನ ರವೆ- 2 ಟೀ. ಚಮಚ2. ತೆಂಗಿನಕಾಯಿ- 1 ಬಟ್ಟಲು3. ಮೆಣಸು- 104. ಉಪ್ಪು- 1/2 ಟೀ ಚಮಚ5. ಕರಿಬೇವು - 1 ಕಡ್ಡಿ6. ತುಪ್ಪ- 1/2 ಟೀ ಚಮಚ, 1 ಟೀ. ಚಮಚ7. ಜೀರಿಗೆ- 1/2 ಟೀ ಚಮಚಮಾಡುವ ವಿಧಾನ.ಗೋಧಿಯನ್ನು ಪಟ ಪಟ ಅನ್ನುವ ಹಾಗೆ ಹುರಿಯಿರಿ. ಇಲ್ಲವಾದರೆ ರವೆಯನ್ನು ಹುರಿಯಿರಿ.1/2 ಟೀ. ಚಮಚ ತುಪ್ಪ ಹಾಕಿ ಮೆಣಸನ್ನು ಪಟ ಪಟ ಅನ್ನುವ ಹಾಗೆ ಹುರಿಯಿರಿ.ಮೆಣಸು, ಗೋಧಿ/ ರವೆ, ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿ.ರುಬ್ಬಿದ ಪೇಸ್ಟ್‌ಅನ್ನು ಒಂದು ಪಾತ್ರೆಗೆ ಹಾಕಿ, ಕರಿಬೇವು, ಉಪ್ಪು ಹಾಕಿ ನೀರು ಬೆರಸಿ ತಿಳಿಸಾರಿನ ಹದಕ್ಕೆ ಮಾಡಿ ಕುದಿಸಿ.1 ಟೀ ಚಮಚ ತುಪ್ಪ ಕಾಯಿಸಿ, 1/4 ಟೀ. ಚಮಚ ಜೀರಿಗೆ ಹಾಕಿ ಒಗ್ಗರಣೆ ಮಾಡಿ ಸಾರು ಚೆನ್ನಾಗಿ ಕುದ್ದ ಮೇಲೆ ಒಗ್ಗರಣೆ ಕೊಡಿ.ಇದನ್ನು ಬಿಸಿ ಬಿಸಿಯಾಗಿ ಇರುವಾಗಲೇ ಅನ್ನಕ್ಕೆ ಹಾಕಿಕೊಂಡು ತಿನ್ನಬೇಕು..- ಶ್ರೀದೇವಿ (ಸಖಿ ಪಾಕ್ಷಿಕದಿಂದ ಆಯ್ದ ಲೇಖನ).Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics