ಸಾಮಗ್ರಿಗಳು
1. ಮಾವಿನ ಬತ್ತಲು- 2 ರುಪಾಯಿ ನಾಣ್ಯದ ಗಾತ್ರದ್ದು
2. ಉಪ್ಪು- ರುಚಿಗೆ ತಕ್ಕಷ್ಟು,
3. ಸಕ್ಕರೆ- 3 ಟೀ ಚಮಚ
4. ತುಪ್ಪ- 1 ಟೀ ಚಮಚ,
5. ಜೀರಿಗೆ- 1/4 ಟೀ ಚಮಚ
6. ಮೆಣಸು- 5
ಮಾಡುವ ವಿಧಾನ
ಮಾವಿನಕಾಯಿ ಸಿಪ್ಪೆ ತೆಗೆದು, ತುರಿದು ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿ ಚೆನ್ನಾಗಿ 3 ದಿನ ಒಣಗಿಸಿ. ಇದನ್ನು ವರ್ಷಪೂರ್ತಿ ಬಳಸಬಹುದು(ಬಾಳಕ) ಮಾವಿನಕಾಯಿ ಬಾಳಕವನ್ನು ನೀರಿನಲ್ಲಿ ನೆನಸಿ, ಕುದಿಸಿ, ಅದನ್ನು ಶೋಧಿಸಿ ರಸ ತೆಗೆದಿಟ್ಟುಕೊಳ್ಳಿ. ರಸಕ್ಕೆ ಉಪ್ಪು, ಸಕ್ಕರೆ, 1 ಲೋಟ ನೀರು ಹಾಕಿ ಕುದಿಸಿ. ತುಪ್ಪ ಕಾಯಿಸಿ ಜೀರಿಗೆ, ಮೆಣಸು ಹಾಕಿ ಒಗ್ಗರಣೆ ಮಾಡಿ ಸಾರು ಕುದಿಯುತ್ತಿರುವಾಗ ಹಾಕಿ. ಇದನ್ನು ಬಿಸಿಬಿಸಿಯಾಗಿ ಇರುವಾಗ ಅನ್ನಕ್ಕೆ ಹಾಕಿಕೊಂಡು ಊಟ ಮಾಡಿ.
- ಶ್ರೀದೇವಿ
(ಸಖಿ ಪಾಕ್ಷಿಕದಿಂದ ಆಯ್ದ ಲೇಖನ)