ಬೇಸನ್ ಲಡ್ಡು
ಬೇಸನ್ ಲಡ್ಡು ಮಾಡುವ ವಿಧಾನ
ಬೇಸನ್ ಲಡ್ಡು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು
- ಕಡ್ಲೆ ಹಿಟ್ಟು 2 ಕಪ್
- ತುಪ್ಪ 1 ಕಪ್
- ಸಕ್ಕರೆ 1ಕಪ್
- ಎಲಕ್ಕಿ, ಗೋಡಂಬಿ, ದ್ರಾಕ್ಷಿ, ಬಾದಾಮಿ
- ಮಾಡುವ ವಿಧಾನ: ಸ್ಟವ್ ಹಚ್ಚಿ ದಪ್ಪ ತಳ ಇರುವ ಪಾತ್ರೆಯಲ್ಲಿ ತುಪ್ಪ ಕಾಯಲು ಬಿಡಿ. ತುಪ್ಪ ಕರಗಿದ ಮೇಲೆ ಅದಕ್ಕೆ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಕೈ ಬಿಡದ ಹಾಗೆ ಚೆನ್ನಾಗಿ ಮಿಕ್ಸ್ ಮಾಡುತ್ತಿರಬೇಕು. ಸುಮಾರು 15ರಿಂದ 20 ನಿಮಿಷದವರೆಗೆ ಕೈ ಆಡಿಸುತ್ತಿರಬೇಕು. ಕಡಲೆಹಿಟ್ಟು ಮತ್ತು ತುಪ್ಪ ಚೆನ್ನಾಗಿ ಮಿಕ್ಸ್ ಆಗಿ ಪಾಕದ ರೀತಿ ಬರುವವರೆಗೂ ಕಲೆಸುತ್ತಿರಬೇಕು.ನಂತರ ತಣ್ಣಗಾಗಲು ಬಿಡಿ.
- ಪಾಕ ಉಗುರು ಬೆಚ್ಚಗೆ ಇರುವಾಗ ಅದಕ್ಕೆ ಪುಡಿ ಮಾಡಿದ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ಅದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಏಲಕ್ಕಿ ಹಾಕಿ ಕಲೆಸಿ. ತದನಂತರ ಕೈಗೆ ಸ್ವಲ್ಪ ತುಪ್ಪ ಹಚ್ಚಿಕೊಂಡು ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆ ಮಾಡಿ. ಈಗ ಸಿಹಿಯಾದ ಬೇಸನ್ ಲಾಡು ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.