ಕ್ಯಾಬೇಜ್ ಪಕೋಡಾ
ಕ್ಯಾಬೇಜ್ ಪಕೋಡಾ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು:
- ಹೆಚ್ಚಿದ ಕ್ಯಾಬೇಜ್ - 1 ಬಟ್ಟಲು
- ಕಡ್ಲೆಹಿಟ್ಟು - 1.1/2 ಬಟ್ಟಲು
- ಖಾರಪುಡಿ - 2 ಚಮಚ
- ಹೆಚ್ಚಿದ ಈರುಳ್ಳಿ - 1/2 ಬಟ್ಟಲು
- ಕೊತ್ತಂಬರಿ ಸೊಪ್ಪು- 4 ಚಮಚ
- ಇಂಗು - 1 ಚಮಚ
- ಶುಂಠಿ ಬೆಳ್ಳುಳ್ಳಿ ಪೇಸ್ಟು - 1 ಚಮಚ
- ಧನಿಯಾ ಪುಡಿ - ಒಂದು ಚಮಚ
- ಜೀರಿಗೆ ಪುಡಿ- ಒಂದು ಚಮಚ
- ಉಪ್ಪು - ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
- ಕಡ್ಲೆಹಿಟ್ಟನ್ನು ಸ್ವಲ್ಪ ನೀರು ಸೇರಿಸಿ ಸ್ವಲ್ಪ ಗಟ್ಟಿ ಹದಕ್ಕೆ ಕಲಸಿಕೊಳ್ಳಿ.
- ನಂತರ ಇದಕ್ಕೆ ಖಾರದ ಪುಡಿ, ಹೆಚ್ಚಿಟ್ಟುಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಇಂಗು, ಶುಂಠಿ-ಬೆಳ್ಳುಳ್ಳು ಪೇಸ್ಟ್, ದನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು, ಹೆಚ್ಚಿಟ್ಟುಕೊಂಡ ಕ್ಯಾಬೇಜ್ ಎಲ್ಲಾ ಸಾಮಾಗ್ರಿಗಳನ್ನು ಒಂದೊಂದಾಗಿ ಸೇರಿಸಿ ಕಲಸಿ.
- ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ.
- ಎಣ್ಣೆ ಕಾದ ಮೇಲೆ ಮಿಶ್ರಣಮಾಡಿಟ್ಟಕೊಂಡದ್ದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ಕಾದ ಎಣ್ಣೆಗೆ ಹಾಕಿ. ಗರಿಗರಿಯಾಗಿ ಕರಿದರೆ ಬಿಸಿ ಬಿಸಿ ಕ್ಯಾಬೇಜ್ ಪಕೋಡಾ ಸಿದ್ಧವಾಗುತ್ತದೆ.
- ಪಕೋಡಾವನ್ನು ಪುದಿನಾ ಚಟ್ನಿಯೊಂದಿಗೆ ಸವಿದರೆ ಹೆಚ್ಚು ರುಚಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.