ಖರ್ಜೂರದ ಹಲ್ವಾ
ಖರ್ಜೂರದ ಹಲ್ವಾ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಖರ್ಜೂರ - 2 ಬಟ್ಟಲು
- ಬಿಸಿ ಹಾಲು -2 ಬಟ್ಟಲು
- ಸಕ್ಕರೆ - ಒಂದು ಬಟ್ಟಲು
- ತುಪ್ಪ - ಅರ್ಧ ಬಟ್ಟಲು
- ಏಲಕ್ಕಿ ಪುಡಿ - ಸ್ವಲ್ಪ
- ಬಾದಾಮಿ - 5-6
ಮಾಡುವ ವಿಧಾನ
- ಬಿಸಿ ಹಾಲಿನಲ್ಲಿ ಖರ್ಜೂರವನ್ನು ಕಮ್ಮಿಯೆಂದರೂ 3 ಗಂಟೆಗಳ ಕಾಲ ನೆನೆ ಹಾಕಬೇಕು. ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು.
- ನಂತರ ತಟ್ಟೆಯೊಂದಕ್ಕೆ ತುಪ್ಪ ಸವರಿಟ್ಟುಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆಯೊಂದಕ್ಕ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿಕೊಂಡ ಖರ್ಜೂರದ ಪೇಸ್ಟ್ ಹಾಗೂ ಸಕ್ಕರೆ ಹಾಕಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಸೌಟ್ ನಿಂದ ಕೈಯಾಡಿಸಿ.
- ನಂತರ ಏಲಕ್ಕಿ ಹಾಕಿ. ಈ ಮಿಶ್ರಣವನ್ನು ತುಪ್ಪಸವರಿಸ ತಟ್ಟೆಗೆ ಹಾಕಿ ಅದರ ಮೇಲೆ ಬಾದಾಮಿಯನ್ನು ಉದುರಿಸಿ ತಣ್ಣಾಗಾಗಲು ಬಿಡಿ.
- ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡರೆ ಖರ್ಜೂರದ ಹಲ್ವಾ ತಯಾರಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.