ಜೋಳ ಮತ್ತು ತರಕಾರಿ ರಾಯತ
ಜೋಳ ಮತ್ತು ತರಕಾರಿ ರಾಯತ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಹೂಕೋಸು - ಸಣ್ಣ ಗಾತ್ರದ್ದು
- ಹಸಿ ಬಟಾಣಿ - ಅರ್ಧ ಬಟ್ಟಲು
- ಆಲೂಗಡ್ಡೆ - ಎರಡು
- ಈರುಳ್ಳಿ - ಎರಡು (ಬೇಕಿದ್ದರೆ)
- ಜೋಳ - ಮೂರು
- ಕ್ಯಾರಟ್- ಎರಡು
- ಫ್ರೆಂಚ್ ಬೀನ್ಸ್- ಅರ್ದ ಬಟ್ಟಲು
- ಮೊಸರು - ಎರಡು ಬಟ್ಟಲು
- ಸಕ್ಕರೆ ಮತ್ತು ಉಪ್ಪು - ರುಚಿಗೆ ತಕ್ಕಷ್ಟು
- ಹಸಿ ಮೆಣಸಿನಕಾಯಿ - ನಾಲ್ಕು
- ಸಾಸಿವೆ- ಸ್ವಲ್ಪ
- ಕರಿಬೇವ- ಸ್ವಲ್ಪ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಅಡುಗೆ ಎಣ್ಣೆ - ಸ್ವಲ್ಪ
ಮಾಡುವ ವಿಧಾನ...
- ಮೊದಲಿಗೆ ಎಲ್ಲಾ ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಂಡು, ಬಟಾಣಿ, ಬಿಡಿಸಿ ಜೋಳದ ಕಾಳುಗಳ ಸಮೇತ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಕುಕ್ಕರು ನಾಲ್ಕು ವಿಷಲ್ ಹಾಕಿದರೂ ಸಾಕು. ನಂತರ ನೀರನ್ನು ಬಸಿದು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ.
- ಒಂದು ಅಗಲ ತಳದ ಪಾತ್ರೆಯಲ್ಲಿ ನಾಲ್ಕಾರು ಚಮಚದಷ್ಟು ಎಣ್ಣೆ ಹಾಕಿ, ಸ್ಟೌ ಉರಿಯನ್ನು ಸಿಮ್ ನಲ್ಲಿಡಿ. ಬಿಸಿಯಾದ ನಂತರ ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿ ಹಾಕಿ ತಾಳಿಸಿ.
- ಒಗ್ಗರಣೆ ಪಾತ್ರೆಗೆ ಮೊಸರನ್ನು ಕಡಗೋಲಿನಿಂದ ಕಡಿದು ಹಾಕಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಸಕ್ಕರೆ ಹಾಕಿ ಕೈಯಾಡಿಸಿ.
- ಇಷ್ಟಾದ ಮೇಲೆ ಬೇಯಿಸಿಟ್ಟುಕೊಂಡ ತರಕಾರಿಗಳನ್ನು ಪಾತ್ರೆಗೆ ಸುರಿದು ಐದರಿಂದ ಆರು ನಿಮಿಷ ಬೇಯಲು ಬಿಡಿ. ಅದಕ್ಕೆ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ತೊಳೆದು ಸಣ್ಣಗೆ ಕತ್ತರಿಸಿ ಹಾಕಿ ಕೈಯಾಡಿಸಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.