ಚನ್ನಾಕರಿ 
ಅಡುಗೆ

ಚನ್ನಾಕರಿ

ಚನ್ನಾಕರಿ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • ಕಾಬೂಲ್ ಕಡಲೆಕಾಳು - ಕಾಲು ಕೆಜಿ
  • ಗರಂ ಮಸಾಲಾ - 1 ಚಮಚ
  • ಮಾವಿನಕಾಯಿ ಪುಡಿ- ಅರ್ಧ ಚಮಚ
  • ಈರುಳ್ಳಿ - 2
  • ಟೊಮೆಟೊ- 2
  • ಶುಂಠಿ,ಬೆಳ್ಳುಳ್ಳಿ ಪೇಸ್ಟ್ - 1 ಚಮಚ
  • ಖಾರದ ಪುಡಿ - 1 ಚಮಚ
  • ಜೋಳದ ಹಿಟ್ಟು - ಅರ್ಧ ಬಟ್ಟಲು
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ - ಕರಿಯಲು
ಮಾಡುವ ವಿಧಾನ
  • ಕಡಲೆಕಾಳು ಕರಿ ತಯಾರಿಸಲು ಹಿಂದಿನ ದಿನದ ರಾತ್ರಿಯೇ ಕಾಬೂಲ್ ಕಡಲೆಕಾಳುಗಳನ್ನು ನೆನೆ ಹಾಕಿಕೊಳ್ಳಬೇಕು.
  • ನಂತರ ಕುಕ್ಕರಿನಲ್ಲಿ ನೆನೆಸಿದ ಕಾಬೂಲ್ ಕಡಲೆಕಾಳುಗಳನ್ನು ಬೇಯಿಸಿಕೊಳ್ಳಬೇಕು.
  • ಒಂದು ಬಾಣಲೆಗೆ ಜೋಳದ ಹಿಟ್ಟು, ಉಪ್ಪು, ಖಾರದ ಪುಡಿ, ಬೆಂದ ಕಡಲೆಕಾಳುಗಳನ್ನು ಸ್ವಲ್ಪ ನೀರಿನೊಂದಿಗೆ ಗಟ್ಟಿಯಾಗಿ ಮಿಶ್ರಣ ಮಾಡಬೇಕು.
  • ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಹಿಟ್ಟಿನಲ್ಲಿ ಕಲಸಿಟ್ಟ ಕಡಲೆಕಾಳುಗಳನ್ನು ಕರಿದು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು.
  • ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಹುರಿದುಕೊಳ್ಳಬೇಕು. ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ ಹುರಿದುಕೊಳ್ಳಬೇಕು. ಈರುಳ್ಳಿ ಚಿನ್ನದ ಬಣ್ಣ ಬಂದ ನಂತರ ಟೊಮೆಟೊ ಪ್ಯೂರಿ ಸೇರಿಸಿ ಮತ್ತೆ 3 ನಿಮಿಷ ಹುರಿಯಬೇಕು. ಇದಕ್ಕೆ ಖಾರದ ಪುಡಿ, ಗರಂ ಮಸಾಲಾ, ಉಪ್ಪು, ಮಾವಿನಕಾಯಿ ಪುಡಿ ಹಾಕಿ ಕುದಿಸಬೇಕು.
  • ಈ ಮಸಾಲೆಗೆ ಕರಿದಿಟ್ಟ ಕಡಲೆಕಾಳುಗಳನ್ನು ಹಾಕಿದರೆ ಬಿಸಿಬಿಸಿಯಾದ ಗರಿಯಾದ ಕಾಬೂಲ್ ಕಡಲೆಕಾಳಿನ ಕರಿ ತಯಾರಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video