ಹೂಕೋಸನ್ನು ಸಣ್ಣಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ನಂತರ ಬಿಸಿ ನೀರು ಕಾಯಿಸಿ ಅದಕ್ಕೆ ಬಿಡಿಸಿಕೊಂಡ ಹೂಕೋಸನ್ನು ಹಾಕಿ 20-25 ನಿಮಿಷಗಳ ಕಾಲ ನೆನೆಪಿಸಿಕೊಳ್ಳಬೇಕು.
ನಂತರ ಬಾಣಲೆಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ಮೇಲ ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ಬಿಸಿನೀರಿನಲ್ಲಿ ನೆನೆಸಿದ ಹೂಕೋಸನ್ನು ಹಾಕಿ 3-5 ನಿಮಿಷ ಬೇಯಿಸಬೇಕು.
ನಂತರ ಅರಿಶಿನದ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಕಂದು ಬಣ್ಣ ಬರುವವರೆ ಹೂಕೋಸನ್ನು 8-10 ನಿಮಿಷ ಬೇಯಿಸಬೇಕು.
ಇದಕ್ಕೆ ಬಟಾಣಿ, ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ, ಗರಂ ಮಸಾಲಾ ಪುಡಿ, ದನಿಯಾ ಪುಡಿ, ಬೇಯಲು ಸ್ವಲ್ಪ ನೀರು ಹಾಕಿದರೆ ಬೇಯಿಸಿದರೆ ರುಚಿಕರ ಗೋಬಿ ಬಟಾಣಿ ಪಲ್ಯ ತಿನ್ನಲು ಸಿದ್ಧವಾಗುತ್ತದೆ.