ಮೊದಲಿಗೆ ಬಾಸುಮತಿ ಅಕ್ಕಿಯನ್ನು ತೊಳೆದು ಅನ್ನ ಮಾಡಿಕೊಳ್ಳಬೇಕು.
ನಂತರ ಪ್ಯಾನ್ ಗೆ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಹಸಿ ಮೆಣಸಿನಕಾಯಿ, ಈರುಳ್ಳಿ, ಹೆಚ್ಚಿದ ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಾಂ, ಮತ್ತು ಕ್ಯಾಬೇಜ್ ಹಾಕಿ ಫ್ರೈ ಮಾಡಿ.
ನಂತರ ಅದಕ್ಕೆ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಶುಂಠಿ, ವೈಟ್ ಪೆಪ್ಪರ್ ಪೌಡರ್, ಅಜಿನೋಮೊಟೊ, ಗರಂ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲೆಸಿ.
ಈ ಮಿಶ್ರಣಕ್ಕೆ ಬಾಸುಮತಿ ಅಕ್ಕಿಯಿಂದ ಸಿದ್ದಪಡಿಸಿರುವ ಅನ್ನವನ್ನು ಹಾಕಿ ಚೆನ್ನಾಗಿ ಕಲೆಸಿ.
ನಂತರ ಇನ್ನೊಂದು ಪ್ಯಾನ್ ನಲ್ಲಿ 1 ಸ್ಪೂನ್ ಎಣ್ಣೆ ಹಾಕಿ, ಕಾದ ನಂತರ ಸ್ಪ್ರಿಂಗ್ ಆನಿಯನ್ ಹಾಕಿ, ತದ ನಂತರ ಮೊಟ್ಟೆ ಒಡೆದು ಚೆನ್ನಾಗಿ ಮಿಕ್ಸ್ ಮಾಡಿ. ಮೊಟ್ಟೆ ಚೆನ್ನಾಗಿ ಪುಡಿ ಪುಡಿಯಾಗಿ ನೀರಿನ ಅಂಶ ಹೋಗುವವರೆಗೂ ತಿರುಗಿಸಿ. ಸ್ವಲ್ಪ ತಣ್ಣಗಾದ ನಂತರ ಮೊದಲೇ ಸಿದ್ದಪಡಿಸಿಕೊಂಡಿರುವ ಮಿಶ್ರಣಕ್ಕೆ ಮೊಟ್ಟೆ ಹಾಕಿ ಸಣ್ಣ ಹುರಿಯಲ್ಲಿ ಸ್ವಲ್ಪ ಸಮಯ ಕೈ ಆಡಿಸುತ್ತಿರಿ. ಇದಕ್ಕೆ ಸೋಯಾ ಹಾಗೂ ಚಿಲ್ಲಿ ಸಾಸ್ ಹಾಕಿ ಮಿಕ್ಸ್ ಮಾಡಿ, ಬಿಸಿಯಾಗಿರುವಾಗಲೇ ಸರ್ವ್ ಮಾಡಿ.