ಸ್ವೀಟ್ ಚಾಕೊಲೇಟ್
ಸ್ವೀಟ್ ಚಾಕೊಲೇಟ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಮಿಲ್ಕ್ ಪೌಡರ್ - 3 ಕಪ್
- ಚಾಕೋಲೇಟ್ ಪುಡಿ - 1ಕಪ್
- ಸಕ್ಕರೆ - 2 ಕಪ್
- ಬೆಣ್ಣೆ - ಅರ್ಧಕಪ್
ಮಾಡುವ ವಿಧಾನ....
- ಚಾಕೊಲೇಟ್ ಹಾಗೂ ಹಾಲಿನ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
- ನಂತರ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ಸ್ವಲ್ಪ ನೀರು ಹಾಕಬೇಕು.
- ನೀರು ಕುದಿ ಬಂದ ಮೇಲೆ ಸಕ್ಕರೆ ಹಾಕಬೇಕು. ಸಕ್ಕರೆ ಪಾಕ ನೂಲಿನಂತೆ ಬಂದ ಮೇಲೆ ಬೆಣ್ಣೆ ಹಾಕಬೇಕು.
- ಬೆಣ್ಣೆ ಹಾಕಿ 2 ನಿಮಿಷವಾದ ಮೇಲೆ ಚಾಕೊಲೇಟ್ ಹಾಗೂ ಮಿಲ್ಕ್ ಪೌಡರ್ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಹಾಕಿ ಕೈಯಾಡಿಸಿದರೆ ಗಟ್ಟಿಯಾಗುತ್ತಾ ಬರುತ್ತದೆ.
- ನಂತರ ಒಂದು ತಟ್ಟೆಯಲ್ಲಿ ತುಪ್ಪ ಸವರಿ ತಯಾರಾದ ಚಾಕೊಲೇಟ್ ನ್ನು ಹಾಕಬೇಕು. ಬೇಕಿದ್ದರೆ ಇದಕ್ಕೆ ದ್ರಾಕ್ಷಿ, ಗೋಡಂಬಿ, ಗೋಡಂಬಿಗಳನ್ನು ಸೇರಿಸಬಹುದು.
- ತಣ್ಣಗಾದ ಚಾಕೊಲೇಟ್ ನ್ನು ಮೇಲೆ ನಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿದರೆ ಸ್ಟೀಟ್ ಚಾಕೊಲೇಟ್ ಸಿದ್ಧವಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.