ನೀರು ಮಾವಿನಕಾಯಿ ಮಜ್ಜಿಗೆ ಹುಳಿ
ನೀರು ಮಾವಿನಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ...
ಮಾವಿನಕಾಯಿಯನ್ನು ಮಳೆಗಾಲಕ್ಕೆ ಶೇಖರಿಸಿಡುವ ಸಂಪ್ರದಾಯ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿವೆ. ಉಪ್ಪು ನೀರು ತಯಾರಿಸಿ ಅದರಲ್ಲಿ ಮಾವಿನಕಾಯಿ ಹಾಕಿ ಒಂದು ವರ್ಷದವರೆಗೆ ಕೆಡದಂತೆ ಇಡಬಹುದು. ಈ ಮಾವಿನಕಾಯಿಯಿಂದ ಸಾರು, ಪಲ್ಯ, ಗೊಜ್ಜು, ತಂಬುಳಿ, ಸಾಂಬಾರು, ಮಜ್ಜಿಗೆಹುಳಿ ಇತ್ಯಾದಿ ಖಾದ್ಯಗಳನ್ನು ಮಾಡಬಹುದು.
ಬೇಕಾಗುವ ಪದಾರ್ಥಗಳು
- ನೀರು ಮಾವಿನಕಾಯಿ
- 1.5 ಕಪ್ ಕಾಯಿತುರಿ
- 1 ಹಸಿಮೆಣಸು
- ರುಚಿಗೆ ತಕ್ಕಷ್ಟು ಉಪ್ಪು
- 1.5 ಚಮಚ ಸಾಸಿವೆ
- 1/4 ಚಮಚ ಜೀರಿಗೆ
- 1-2 ಮೆಣಸಿನಕಾಯಿ
- 4-5 ಕರಿಬೇವು ಎಲೆ
- 1 ಚಮಚ ಎಣ್ಣೆ
ಮಾಡುವ ವಿಧಾನ....
- ಉಪ್ಪು ನೀರಿನಿಂದ ಮಾವಿನಕಾಯಿ ತೆಗೆದು ಅದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ಅದನ್ನು ಸಣ್ಣಗೆ ಹೆಚ್ಚಿಕೊಂಡು ಒಲೆಯಲ್ಲಿ ಬೇಯಿಸಿ.
- ಕಾಯಿತುರಿ, ಹಸಿಮೆಣಸು, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಪಾತ್ರೆಗೆ ಹಾಕಿ ಕುದಿಸಿ. ನಂತರ ಅದಕ್ಕೆ ಸ್ವಲ್ಪ ಮಜ್ಜಿಗೆ ಸೇರಿಸಿ.
- ಕರಿಬೇವು, ಸಾಸಿವೆ, ಒಣಮೆಣಸು ಒಗ್ಗರಣೆ ಕೊಡಿ. ಅನ್ನ, ಚಪಾತಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.