ಸಾಮಗ್ರಿಗಳು
1. ಹುರುಳಿ- 1 ಪಾವು
2. ಚಕ್ಕೊತನೆ ಸೊಪ್ಪು- 1 ಕಟ್ಟು
3. ತೆಂಗಿನಕಾಯಿ ತುರಿ- 1 ಬಟ್ಟಲು
4. ಹಸಿಮೆಣಸಿನಕಾಯಿ- 5-6
5. ಅಕ್ಕಿಹಿಟ್ಟು- 3/4 ಟೀ. ಚಮಚ
6. ಕೊತ್ತಂಬರಿ ಸೊಪ್ಪು- 1 ಕಪ್
7. ಸಾರಿನ ಪುಡಿ- 3/4 ಟೀ ಚಮಚ
8. ಎಣ್ಣೆ- 1 ಟೀ ಚಮಚ
9. ಸಾಸಿವೆ- 1 ಟೀ ಚಮಚ
10. ಉಪ್ಪು, ಇಂಗು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಹುರುಳಿಯನ್ನು ಬೇಯಿಸಿ, ಚಕ್ಕೊತನೆ ಸೊಪ್ಪನ್ನು ಬೇಯಿಸಿ ಕಾಳನ್ನು ಒಗ್ಗರಣೆ ಮಾಡಿ ಅದರಲ್ಲಿ ಬೇಯಿಸಿ. ಕಾಯಿತುರಿ, ಹಸಿಮೆಣಸಿನಕಾಯಿ, ಅಕ್ಕಿಹಿಟ್ಟು, ಉಪ್ಪು, ಕೊತ್ತಂಬರಿಸೊಪ್ಪು, 1 1/2 ಹಿಡಿ ಬೆಂದ ಕಾಳು ಎಲ್ಲವನ್ನು ಮಿಕ್ಸಿಗೆ ಹಾಕಿ ಬೇಯಿಸಿ. ಬೆಂದ ಹುರುಳಿಗೆ ಪೇಸ್ಟ್ ಹಾಕಿ, ನೀರು ಹಾಕಿ ಕುದಿಸಿ. ತುಪ್ಪ ಕಾಯಿಸಿ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಸಾರಿಗೆ ಕೊಡಿ.
- ಶ್ರೀದೇವಿ