ನೀರಿನಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಉದ್ದಿನ ಬೇಳೆಯನ್ನು ನೆನೆಹಾಕಿರಿ. ನಂತರ ಚೆನ್ನಾಗಿ ಹದವಾಗಿ ರುಬ್ಬಿಕೊಳ್ಳಿರಿ. ಸಣ್ಣದಾಗಿ ಹಚ್ಚಿಕೊಂಡ ಹಸಿಮೆಣಸಿನಕಾಯಿ, ತೆಂಗಿನ ಕಾಯಿ ಚೂರು, ಕರಿಬೇವು. ಇಂಗು ಮತ್ತು ಉಪ್ಪು ಬೆರೆಸಿ ಅದಕ್ಕೆ ಸ್ವಲ್ಪ ಬಿಸಿ ಎಣ್ಣೆ ಹಾಕಿ ಹದವಾಗಿ ಕಲಸಿ.
ಈಗ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ. ಉದ್ದಿನ ಹಿಟ್ಟನ್ನು ಕೈಯಿಂದ ಸಣ್ಣ ಸಣ್ಣ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆಯಲ್ಲಿ ಹಾಕಿ ಕೆಂಪು ಬಣ್ಣ ಬರುವ ತನಕ ಕರಿಯಿರಿ.
ಎಣ್ಣೆ ಬಸಿದು ಹೋಗುವಂಥ ಸೌಟಿನಿಂದ ಬೋಂಡ ತೆಗೆಯಿರಿ. ರುಚಿಕರ ಮೈಸೂರು ಬೋಂಡ ತಯಾರಾಗುತ್ತದೆ. ಸಾಂಬಾರು ಅಥವಾ ಚಟ್ನಿಯೊಂದಿಗೆ ತಿನ್ನಲು ಈ ಬೋಂಡಾ ಬಲು ರುಚಿಕರವಾಗಿರುತ್ತದೆ.