ಬೇಕಾದ ಸಾಮಾಗ್ರಿ
2 ಕಪ್ -ಸ್ವೀಟ್ ಕಾರ್ನ್
3-4 -ಹಸಿ ಮೆಣಸು
2-3 ಟೇಬಲ್ ಸ್ಪೂನ್ ದೊಣ್ಣೆ ಮೆಣಸು (ಸಣ್ಣಕ್ಕೆ ಹೆಚ್ಚಿದ್ದು)
ಅಕ್ಕಿ ಹಿಟ್ಟು - 2 ಟೇಬಲ್ ಸ್ಪೂನ್
ಎಣ್ಣೆ,
ಉಪ್ಪು
ತಯಾರಿಸುವ ವಿಧಾನ: ಸ್ವೀಟ್ ಕಾರ್ನ್‌ನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಸ್ವೀಟ್ ಕಾರ್ನ್‌ನಲ್ಲಿ ನೀರಿನಂಶ ಇರುವುದರಿಂದ ನೀರು ಹಾಕದೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ತಟ್ಟೆಗೆ ಹಾಕಿಟ್ಟುಕೊಳ್ಳಿ. ಹೆಚ್ಚಿದ ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅಕ್ಕಿ ಹಿಟ್ಟು ಈ ಮಿಶ್ರಣಕ್ಕೆ ಒಳ್ಳೆಯ ಹದವನ್ನು ನೀಡುತ್ತದೆ. ಈ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಅಂಬೊಡೆಯ ಗಾತ್ರದಲ್ಲಿ ಎಣ್ಣೆಯಲ್ಲಿ ಕರಿಯಿರಿ. ನಂತರ ಟೊಮ್ಯಾಟೋ ಸಾಸ್ ಅಥವಾ ಪುದೀನಾ ಚಟ್ನಿ ಜತೆ ಸವಿಯಿರಿ.
-ಪ್ರೀತಿ ವಸಿಷ್ಠ, ಬೆಂಗಳೂರು.
raopreeti3@gmail.com