ಅಲಸಂದೆ ರೊಟ್ಟಿ
ಅಲಸಂದೆ ರೊಟ್ಟಿ ಮಾಡುವ ವಿಧಾನ...
ಪದಾರ್ಥಗಳು
- ಅಲಸಂದೆ ಕಾಳು - 200 ಗ್ರಾಂ
- ಕಡಲೆಹಿಟ್ಟು - 200 ಕಿ.ಗ್ರಾಂ
- ಗೋಧಿ ಹಿಟ್ಟು - 200 ಕಿ.ಗ್ರಾಂ
- ಹಸಿಮೆಣಸಿನಕಾಯಿ - 8
- ಜೀರಿಗೆ - ಎರಡು ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ - ಕರಿಯಲು
- ಕೊತ್ತಂಬರಿ ಸೊಪ್ಪು - ಅರ್ಧ ಬಟ್ಟಲು
ಮಾಡುವ ವಿಧಾನ
- ಅಲಸಂದೆ ಕಾಳನ್ನು ಚೆನ್ನಾಗಿ ಬೇಯಿಸಿಕೊಂಡು ನಂತರ ಕಾಳನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ಅದಕ್ಕೆ ಈಗ ಗೋಧಿ ಹಿಟ್ಟು, ಕಡಲೆಹಿಟ್ಟು, ಹೆಚ್ಚಿದ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು ಸೇರಿಸಿ ಕಲೆಸಿರಿ.
- ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿರಿ. ನಂತರ ಉಂಡೆಗಳನ್ನು ತಯಾರಿಸಿಕೊಳ್ಳಿ. ನಂತರ ಮದ್ಯದಲ್ಲಿ ಎಣ್ಣೆ ಹಾಕುತ್ತಾ ಲಟ್ಟಿಸಿರಿ.
- ಈಗ ಒಲೆಯ ಮೇಲೆ ಹೆಂಚು ಇಟ್ಟು ಅದು ಚೆನ್ನಾಗಿ ಕಾದ ನಂತರ ಮೊದಲು ಒಂದು ಚಮಚ ಎಣ್ಣೆ ಹಾಕಿ ರೊಟ್ಟಿ ಹಾಕಿರಿ. ರೊಟ್ಟಿಯ ಎರಡೂ ಮಗ್ಗುಲು ಚೆನ್ನಾಗಿ ಬೇಯಿಸಿರಿ ನಂತರ ತೆಗೆಯಿರಿ. ಈಗ ಸಿದ್ದ ರುಚಿಕರ ಅಲಸಂದಿ ರೊಟ್ಟಿ.
-ಮಂಜುಳ.ವಿ.ಎನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.