ಖಾರದ ಪೊಂಗಲ್
ಖಾರದ ಪೊಂಗಲ್ ಮಾಡುವ ವಿಧಾನ...
ಪದಾರ್ಥಗಳು
- ಅಕ್ಕಿ - 250 ಗ್ರಾಂ
- ಹೆಸರುಬೇಳೆ - 100 ಗ್ರಾಂ
- ತುಪ್ಪ- 25 ಗ್ರಾಂ
- ಗೋಡಂಬಿ - 25 ಗ್ರಾಂ
- ಒಣಕೊಬ್ಬರಿ - ಕಾಲು ಗಿಟುಕು
- ಜೀರಿಗೆ - 1 ಚಮಚ
- ಮೆಣಸು - 1 ಚಮಚ
- ಅರಿಶಿನ -1 ಚಿಟಿಕೆ
- ಇಂಗು -1 ಚಿಟಿಕೆ
- ಉಪ್ಪು -ರುಚಿಗೆ ತಕ್ಕಷ್ಟು
ಮಾಡುವ ವಿಧಾನ
- ಹೆಸರು ಬೇಳೆಯನ್ನು ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಹುರಿದುಕೊಳ್ಳಿರಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿರಿ. ಅಕ್ಕಿ ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಹಾಕಿರಿ.
- ಅಕ್ಕಿಯು ಬೇಯುವ ಸಮಯದಲ್ಲಿ ಹುರಿದ ಹೆಸರು ಬೇಳೆಯನ್ನು ಹಾಕಿ ಅದಕ್ಕೆ ಒಂದು ಚೂರು ಅರಿಶಿನ ಪುಡಿ ಬೆರೆಸಿ ಕುದಿಯಲು ಬಿಡಿರಿ.
- ನಂತರ ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದು ಸ್ವಲ್ಪ ಕಾದ ತರುವಾಯ ಜೀರಿಗೆ, ಗೋಡಂಬಿ ಚೂರು ಮತ್ತು ಕಾಳು ಮೆಣಸು ಹಾಕಿ ಚೆನ್ನಾಗಿ ಬಾಡಿಸಿ ಒಲೆಯ ಮೇಲಿನಿಂದ ಕೆಳಗಿಳಿಸಿಕೊಳ್ಳಿರಿ ಅದನ್ನು ಈಗ ಬೆಂದ ಹೆಸರು ಬೇಳೆಗೆ ಬೆರೆಸಿ ಕಲಸಿ. ನಂತರ ತೆಂಗಿನ ತುರಿ. ಉಪ್ಪು ಮತ್ತು ಮಿಕ್ಕ ತುಪ್ಪ ಹಾಕಿ ಕಲಸಿರಿ. ನಂತರ ಸಣ್ಣ ಉರಿಯಲ್ಲಿ ಸ್ವಲ್ಪ ಕಾಲ ಬೇಯಿಸಿ. ಕೆಳಗಿಳಿಸಿದರೆ ರುಚಿಕರವಾದ ಖಾರದ ಪೊಂಗಲ್ ಸಿದ್ದ.
-ಮಂಜುಳ.ವಿ.ಎನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.