ಬಾರ್ಲಿ ಬೆಂದ ನಂತರ, ಇದಕ್ಕೆ ಹಾಲು, ಏಲಕ್ಕಿ ಪುಡಿ,ಸಕ್ಕರೆ, ಹಾಲಿನಲ್ಲಿ ನೆನೆಹಾಕಿದ ಕೇಸರಿ, ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರುಗಳು, ಹುರಿದು ಪುಡಿಮಾಡಿಟ್ಟುಕೊಂಡ ಅಕ್ಕಿ ಪುಡಿ ಹಾಗೂ ಉಳಿದ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಸ್ವಲ್ಪಹೊತ್ತು ಒಲೆಯಮೇಲೆ ಬಿಸಿಯಾಗಲು ಬಿಟ್ಟರೆ ರುಚಿಕರವಾದ ಬಾರ್ಲಿ ಬಾದಾಮಿ ಪಾಯಸ ತಯಾರಾಗುತ್ತದೆ. ಈ ಪಾಯಸ ಬಿಸಿಗಿಂತ ತಣ್ಣಗಾದ ಮೇಲೆಯೇ ಹೆಚ್ಚು ರುಚಿ.