ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಬೇಕು, ನಂತರ ಇದಕ್ಕೆಜೀರಿಗೆಯನ್ನು ಹಾಕಿ ಪುಡಿ ಮಾಡಿ, ಬೆಳ್ಳುಳ್ಳಿ ಹಾಕಿ ನುಣ್ಣಗೆ ಜಜ್ಜಿಕೊಳ್ಳಿಬೇಕು.
ಈರುಳ್ಳು, ಟೊಮೆಟೋ ಹಾಗೂ ಕೊತ್ತಂಬರಿ ಸೊಪ್ಪನ್ನುಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು.
ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಚೆನ್ನಾಗಿ ಕಾದ ನಂತರಸಾಸಿವೆ ಹಾಕಿ ಅದು ಚಟಪಟ ಎಂದು ಶಬ್ಧ ಬಂದ ಮೇಲೆ ಕರಿಬೇವು ಹಾಕಬೇಕು. ಕಡಲೆಬೀಜ ಹಾಕಿ ಸ್ವಲ್ಪಕೆಂಪಗಾದ ನಂತರ ಕಡಲೆಬೇಳೆ, ಉದ್ದಿನಬೇಳೆ ಹಾಕಿ ಬಾಡಿಸಿಕೊಳ್ಳಬೇಕು.
ನಂತರ ಈರುಳ್ಳು ಹಾಕಿ ಚಿನ್ನದ ಬಣ್ಣ ಬರುವವರೆಗೆಬಾಡಿಸಬೇಕು, ಟೊಮೆಟೋ ಹಾಕಿ ಕೆಂಪಗಾಗಲು ಬಿಡಿ.
ಇದಾದನಂತರ ಇದಕ್ಕೆ ಅರಿಶಿನ, ಉಪ್ಪು, ಮೆಣಸು, ಜೀರಿಗೆಹಾಗೂ ಬೆಳ್ಳುಳ್ಳಿ ಕುಟ್ಟಿಟ್ಟುಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಈ ಮೊದಲೇ ಮಾಡಿಟ್ಟುಕೊಂಡಿದ್ದ ಅನ್ನಕ್ಕೆ ಈ ಮಸಾಲೆಯನ್ನುಹಾಕಿ ನಂತರ ಸಣ್ಣಗೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿದರೆ, ಮಸಾಲೆಚಿತ್ರಾನ್ನ ತಯಾರಾಗುತ್ತದೆ. ಶೀತ, ನೆಗಡಿಯಾಗಿದ್ದ ಸಂದರ್ಭದಲ್ಲಿ ಇದನ್ನು ತಿಂದರೆ ನಿವಾರಣೆಯಾಗುತ್ತದೆ.ಬಾಯಿಗೂ ರುಚಿಕರವಾಗಿರುತ್ತದೆ.