- ಅವಲಕ್ಕಿ – 250 ಗ್ರಾಂ
- ಹಸಿಮೆಣಸಿನಕಾಯಿ – 4
- ಜೀರಿಗೆ- ಅರ್ಧ ಚಮಚ
- ಇಂಗು – ಅರ್ಧ ಚಮಚ
- ಎಣ್ಣೆ- ಕರಿಯಲು
- ಉಪ್ಪು – ರುಚಿಗೆತಕ್ಕಷ್ಟು
- ರಾತ್ರಿ ಅಲವಕ್ಕಿಯನ್ನುನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ ನೆನೆಹಾಕಿ. ಮರುದಿನ ಮುಂಜಾನೆ ನೀರು ಬಸಿದು ಅದಕ್ಕೆಇಂಗು, ಉಪ್ಪು, ಜೀರಿಗೆ ಹಾಗೂ ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿಕೊಂಡು ಮಿಕ್ಸಿಯಲ್ಲಿ ಅಥವಾಒರಳಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿರಿ.
- ನಂತರ ಬಿಸಿಲಿನಲ್ಲಿಬಿಳಿ ಬಟ್ಟೆ ಹಾಕಿ ಅದರ ಮೇಲೆ ಚೆಕ್ಕುಲಿ ಒರಳಿನಲ್ಲಿ ಹಿಟ್ಟು ತುಂಬಿ ಚಕ್ಕುಲಿಯನ್ನು ಒತ್ತಿಚೆನ್ನಾಗಿ ಒಣಗಿಸಿಕೊಳ್ಳಿರಿ.
- ಚಕ್ಕುಲಿಗಳು ಚನ್ನಾಗಿಒಣಗಿದ ಮೇಲೆ ಮರುದಿನ ಎಣ್ಣೆ ಚೆನ್ನಾಗಿ ಕಾಯಿಸಿ ನಂತರ ಚೆಕ್ಕುಲಿ ಕರಿಯಿರಿ.
- ಈಗ ರುಚಿಕರ ಚಕ್ಕುಲಿತಯಾರಾಗುತ್ತದೆ. ಬಿಡುವಿನ ಸಮಯದಲ್ಲಿ ಕಾಲ ಕಳೆಯಲು ಇದು ಉಪಯುಕ್ತ.