ಪುದೀನಾ ಚಟ್ನಿ
ಪುದೀನಾ ಚಟ್ನಿ ಮಾಡುವ ವಿಧಾನ...
ಪದಾರ್ಥಗಳು
- ಪುದೀನಾ – 1 ಕಂತೆ
- ಬೆಳ್ಳುಳ್ಳಿ-10-15ಎಸಳು
- ಕೊತ್ತಂಬರಿ ಸೊಪ್ಪು -ಸ್ವಲ್ಫ
- ತೆಂಗಿನ ತುರಿ – ಅರ್ಧಬಟ್ಟಲು
- ಹಸಿಮೆಣಸಿನಕಾಯಿ – 4
- ಹರಿಗಡಲೆ – ಅರ್ಧಬಟ್ಟಲು
- ಜೀರಿಗೆ - ಅರ್ಧ ಚಮಚ
- ಎಣ್ಣೆ – ಸ್ವಲ್ಪ
- ಸಾಸಿವೆ – ಅರ್ಧ ಚಮಚ
- ಇಂಗು – 1 ಚಿಟಿಕೆ
- ಅರಿಶಿನ – 1 ಚಿಟಿಕೆ
- ಹುಣಸೆ ರಸ – ರುಚಿಗೆತಕ್ಕಷ್ಟು
- ಉಪ್ಪು – ರುಚಿಗೆತಕ್ಕಷ್ಟು
ಮಾಡುವ ವಿಧಾನ
- ಪುದಿನಾ ಎಲೆಗಳನ್ನುಬಿಡಿಸಿಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಪುದಿನಾ ಮತ್ತುಹಸಿಮೆಣಸಿನಕಾಯಿ ಹುರಿದುಕೊಳ್ಳಬೇಕು.
- ನಂತರ ಪುದಿನ,ಹಸಿಮೆಣಸಿನಕಾಯಿ, ತೆಂಗಿನ ತುರಿ, ಬೆಳ್ಳುಳ್ಳಿ, ಹುರಿಗಡಲೆ, ಹುಣಸೆಹಣ್ಣು, ಜೀರಿಗೆ, ಕೊತ್ತಂಬರಿಸೊಪ್ಪು, ಹಾಗೂ ಉಪ್ಪು ಹಾಕಿ ಚೆನ್ನಾಗಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
- ಈಗ ಇಂಗು ಹಾಗೂ ಸಾಸಿವೆಯಒಗ್ಗರಣೆ ಹಾಕಬೇಕು. ರುಚಿಕರ ಪುದೀನಾ ಚಟ್ನಿ ಸಿದ್ಧವಾಗುತ್ತದೆ. ಇದನ್ನು ರಾಗಿ ಮುದ್ದೆ ಹಾಗೂರೊಟ್ಟಿಯೊಂದಿಗೆ ತಿಂದರೆ ಬಹಳ ರುಚಿಕರವಾಗಿರುತ್ತದೆ.
-ಮಂಜುಳ.ವಿ.ಎನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.