ಮಾವಿನ ಹಲ್ವಾ
ಮಾವಿನ ಹಲ್ವಾ ಮಾಡುವ ವಿಧಾನ...
ಮಾಡುವ ವಿಧಾನ
- 1ಲೋಟ ಸ್ವಚ್ಛ ಮಾಡಿದ ರವೆ
- 1 ಮಧ್ಯಮ ಗಾತ್ರದ ಮಾವಿನ ಹಣ್ಣಿನ ರಸ
- 2/1 ಲೋಟ ಅಥವಾ ಅಗತ್ಯವಿದ್ದಷ್ಟುಸಕ್ಕರೆ
- 2 ಚಮಚ ತುಪ್ಪ, 1 ಲೋಟ (ಸುಮಾರು 1/4 ಲೀ.) ಹಾಲು
- 11/2 ಲೋಟ ನೀರು
- ಗೋಡಂಬಿ, ಒಣ ದ್ರಾಕ್ಷಿ
- ಮೊದಲಾದ ಡ್ರೈ ಫ್ರೂಟ್ಸ್,
- ಕೇಸರಿ
- 3-4 ಹಸಿರು ಏಲಕ್ಕಿ
- ತುಸು ದಾಳಿಂಬೆ ಕಾಳುಗಳು
ಮಾಡುವ ವಿಧಾನ
- ಸಿಪ್ಪೆ ತೆಗೆದ ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ. ಬಿಸಿ ತುಪ್ಪಕ್ಕೆ ರವೆ ಹಾಕಿ, ಬಣ್ಣ ಬದಲಾಗುವವರೆಗೂ ಹುರಿದು ಕೊಳ್ಳಿ. ಅದಕ್ಕೆ ದ್ರಾಕ್ಷಿ, ಗೋಡಂಬಿ ಹಾಕಿ ಹುರಿಯಿರಿ.
- ಬೇರೆಯದಾಗಿ ನೀರನ್ನು ಕಾಯಿಸಿಕೊಳ್ಳಿ. ಕಾದ ನೀರನ್ನು ಹುರಿದ ರವೆಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
- ಅದಕ್ಕೆ ಸಕ್ಕರೆ ಹಾಗೂ ಹಾಲು ಸೇರಿಸಿ. ಒಂದೆರಡು ನಿಮಿಷಗಳ ನಂತರ ಮಾವಿನ ತಿರುಳನ್ನು ಸೇರಿಸಿ, ಚೆನ್ನಾಗಿ ಕದಡಿ.
- ನಂತರ ಏಲಕ್ಕಿ ಪುಡಿ ಮತ್ತು ಕೇಸರಿಯನ್ನು ಸೇರಿಸಿ. ಒಂದೆರಡು ನಿಮಿಷಗಳ ಕಾಲ ಮುಚ್ಚಿಡಿ.
- ಹಲ್ವಾ ರೆಡಿ. ಅದರ ಮೇಲೆ ದಾಳಿಂಬೆ ಕಾಳುಗಳನ್ನು ಹಾಕಿ ಬಡಿಸಿ. ಇದನ್ನು ಬಿಸಿಯಾಗಿ ಅಥವಾ ತಣ್ಣಗೆಯೂ ಬಡಿಸಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.