ಬೇಕಾಗುವ ಪದಾರ್ಧಗಳು.1 ಲೋಟ ತೆಳು ಬಟ್ಟೆಯಲ್ಲಿ ಸೋಸಿದ ಗಟ್ಟಿ ಮೊಸರು, (ಸಾಧಾರಣ ಮೊಸರಾದರೂ ಬಳಸಬಹುದು)1/4 ಲೋಟ ಮಾವಿನ ತಿರುಳು2 ಚಮಚ ಸಕ್ಕರೆ 1/4 ಚಮಚ ಪುಡಿ ಮಾಡಿದ ಏಲಕ್ಕಿದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಸ್ವಲ್ಪ1 ಚಮಚ ಹಾಲಿನಲ್ಲಿ ನೆನೆಸಿದ ಒಂದೆರಡು ಎಸಳು ಕೇಸರಿಸಿಪ್ಪೆ ತೆಗೆದು ಹೆಚ್ಚಿದ ಒಂದು ಮಾವು..ಮಾಡುವ ವಿಧಾನ.ಗಟ್ಟಿ ಮೊಸರನ್ನು ಅತೆಳು ಬಟ್ಟೆಯಲ್ಲಿ ಹಾಕಿ ಮೂರ್ನಾಲ್ಕು ಗಂಟೆ ಬಿಡಿ. ನಂತರ ಸಿಗುವ ಮೊಸರಿನ ಗಟ್ಟಿಗೆ ಮಾವಿನ ತಿರುಳು, ಏಲಕ್ಕಿ ಪುಡಿ, ಕೇಸರಿ ದಳ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಹಾಗೂ ಸಕ್ಕರೆ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಹದಕ್ಕೆ ಬರುವ ತನಕ ಈ ಮಿಶ್ರಣವನ್ನು ಚೆನ್ನಾಗಿ ಕದಡಿ. ನಂತರ ಶ್ರೀಖಂಡ್ ತಯಾರಾಗುತ್ತದೆ. ಫ್ರೀಡ್ಜ್ ನಲ್ಲಿಟ್ಟು ಬಡಿಸಿದರೂ ಇದು ರುಚಿಯಾಗಿರುತ್ತೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics