ಮೊದಲಿಗೆ ಅವಲಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನಸಿಡಿ.
15 ನಿಮಿಷ ನೀರಿನಲ್ಲಿ ನೆನೆದ ನಂತರ ಬಸಿದುಕೊಳ್ಳಿ.
ಒಂದು ಪಾತ್ರೆಗೆ ಅವಲಕ್ಕಿ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕರಿಬೇವು, ಕೊತ್ತಂಬರಿ ಹಾಗೂ ಪುದಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ನೀರು ಮತ್ತು ಜೀರಿಗೆ ಪುಡಿ ಹಾಕಿ ವಡೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಕಾದ ಎಣ್ಣೆಗೆ ವಡೆ ಹಿಟ್ಟನ್ನು ಸಣ್ಣ ಸಣ್ಣದಾಗಿ ತಟ್ಟಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಕರೆಯಿರಿ. ಬಿಸಿಯಿದ್ದಾಗಲೇ ತಿನ್ನಿರಿ.