ರಸಗುಲ್ಲ
ರಸಗುಲ್ಲ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಒಡೆದ ಹಾಲು ಅಥವಾ ಹಾಲಿನ ಕೆನೆ 1 ಕಪ್
- ಸಕ್ಕರೆ 1 ಕಪ್
- ಮೈದಾ ಹಿಟ್ಟು 2 ಟೀ ಚಮಚ
- ಎಲಕ್ಕಿ ಪುಡಿ
ಮಾಡುವ ವಿಧಾನ
- ಮೊದಲು ಒಡೆದ ಹಾಲನ್ನು ತೆಳುವಾದ ಬಟ್ಟೆಯಲ್ಲಿ ಸೋಸಿಕೊಳ್ಳಿ.
- ನಂತರ ಸಿಗುವ ಹಾಲಿನ ತಿರುಳಿಗೆ ಮೈದಾ ಹಿಟ್ಟು ಸೇರಿಸಿ ನಿಮಿಷ ಚೆನ್ನಾಗಿ ಕಲೆಸಿ.
- 15 ನಿಮಿಷ ಇದನ್ನು ನೆನೆಯಲು ಬಿಡಿ, ಆಮೇಲೆ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಕೊಳ್ಳಿ.
- ನಂತರ 1 ಕಪ್ ಸಕ್ಕರೆಗೆ 1 ಕಪ್ ನೀರನ್ನು ಬೆರೆಸಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ.
- ಕುದಿಯುತ್ತಿರುವ ಪಾಕಕ್ಕೆ ಉಂಡೆಗಳನ್ನು ಹಾಕಿ 5 ನಿಮಿಷ ಬೇಯಿಸಿ.
- ನಂತರ ಎಲಕ್ಕಿ ಪುಡಿ ಹಾಕಿ ತಣ್ಣಗಾದ ಮೇಲೆ ಬಡಿಸಿ.
-ಶಿಲ್ಪ.ಡಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.