ಬೇಬಿಕಾರ್ನ್ ಗೋಲ್ಡನ್ ಫ್ರೈ
ಬೇಬಿಕಾರ್ನ್ ಗೋಲ್ಡನ್ ಫ್ರೈ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಬೇಬಿಕಾರ್ನ್ - 1 ಪ್ಯಾಕೆಟ್
- ಬಿಳಿ ಎಳ್ಳು - 8 ಚಮಚ
- ಕೆಂಪು ಮೆಣಸಿನಪುಡಿ - 4 ಚಮಚ
- ಮೈದಾಹಿಟ್ಟು - ಅರ್ಧ ಕಪ್
- ಕಾರ್ನ್ ಫ್ಲೋರ್ - 1 ಚಮಚ
- ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
- ಹಸಿ ಮೆಣಸಿನಕಾಯಿ - 1
- ಶುಂಠಿ - ಸ್ವಲ್ಪ
ಮಾಡುವ ವಿಧಾನ
- ಬೇಬಿಕಾರ್ನ್ ನ್ನು ಉದ್ದಕ್ಕೆ ಕತ್ತಿರಿಸಿ ತೊಳೆದಿಟ್ಟುಕೊಳ್ಳಬೇಕು. ನಂತರ ನೀರಿನಲ್ಲಿ 15 ನಿಮಿಷ ನೆನೆಯುವುದಕ್ಕೆ ಬಿಡಬೇಕು.
- ಈಗ ಕಾರ್ನ್ ಫ್ಲೋರ್ ಹಾಗೂ ಮೈದಾವನ್ನು ಪೇಸ್ಟ್ ನಂತಾಗುವ ಹಾಗೆ ನೀರಲ್ಲಿ ಕಲೆಸಿಟ್ಟುಕೊಳ್ಳಿ.ಇದರೊಂದಿಗೆ ಬಿಳಿ ಎಳ್ಳನ್ನು ಸಹ ಸೇರಿಸಿ.
- ಈ ಪೇಸ್ಟ್ಗೆ ಹೆಚ್ಚಿದ ಹಸಿ ಮೆಣಸಿನಕಾಯಿಯನ್ನು ಹಾಗೂ ಹೆಚ್ಚಿದ ಶುಂಠಿಯನ್ನು ಹಾಗೂ ಕೆಂಪು ಮೆಣಸಿನ ಪುಡಿಯನ್ನು ಮತ್ತು ಉಪ್ಪನ್ನು ಹಾಕಿ ಮಿಶ್ರಣ ಮಾಡಿ.
- ನಂತರ ತೊಳೆದ ಬೇಬಿ ಕಾರ್ನ್ ಅನ್ನು ಪೇಸ್ಟ್ ನಲ್ಲಿ ಅದ್ದಿ. ಚಿನ್ನದ ಬಣ್ಣ ಬರುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡಿಕೊಂಡಿಕೊಂಡರೆ ಬೇಬಿಕಾರ್ನ್ ಗೋಲ್ಡನ್ ಫ್ರೈ ಸಿದ್ದವಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.