ಪನೀರ್ ಪೆಪ್ಪರ್ ಫ್ರೈ
ಪನೀರ್ ಪೆಪ್ಪರ್ ಫ್ರೈ ಮಾಡುವ ವಿಧಾನ...
ಬೇಕಾಗುವ ಸಾಮಾಗ್ರಿಗಳು
- ಪನೀರ್ - 1 ಪ್ಯಾಕೆಟ್
- ಈರುಳ್ಳಿ - 4
- ಹಸಿಮೆಣಸಿನಕಾಯಿ - 3
- ಕರಿಬೇವಿನ ಸೊಪ್ಪು - ಸ್ವಲ್ಪ
- ಮೆಣಸುಪುಡಿ - 6 ಚಮಚ
- ಮೊಸರು - 6 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ - 6 ಚಮಚ
ಮಾಡುವ ವಿಧಾನ
- ಮೊದಲು ಪನೀರ್ ನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ.
- ಕತ್ತರಿಸಿದ ಪನೀರ್ ಗೆ ಮೊಸರು ಹಾಗೂ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ 4 ಚಮಚ ಮೆಣಸುಪುಡಿ ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿಕೊಳ್ಳಬೇಕು.
- ಈ ಬಾಣಲೆಗೆ 3-4 ಚಮಚ ಎಣ್ಣೆ ಹಾಕಿ. ಇದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಸೇರಿಸಿ. ಇದು ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.
- ನಂತರ ಉಳಿದ ಮೆಣಸಿನ ಪುಡಿ ಉದುರಿಸಿ. ಈಗ ಮೆಣಸಿನಪುಡಿಯಲ್ಲಿ ಮಿಶ್ರಣ ಮಾಡಿದ ಪನೀರ್ ನ್ನು ಇದಕ್ಕೆ ಹಾಕಿ.
- 5 ನಿಮಿಷ ಬಿಟ್ಟು. ಇದಕ್ಕೆ ಮತ್ತೊಮ್ಮೆ ಉಳಿದ ಎಣ್ಣೆಯನ್ನು ಹಾಗೂ ಕರಿಬೇವು ಸೊಪ್ಪಿನ ಎಲೆಗಳನ್ನು ಹಾಕಿದರೆ ಪನೀರ್ ಪೆಪ್ಪರ್ ಫ್ರೈ ತಯಾರಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.