ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು.
ಈರುಳ್ಳಿ ಸಣ್ಣಗೆ ಕತ್ತರಿಸಿ ಹಾಗೂ ಅದನ್ನು ಒಂದೆಡೆ ಇಟ್ಟುಕೊಳ್ಳಬೇಕು.
ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಬೇಕು. ಎಣ್ಣೆ ಬಿಸಿ ಆದ ನಂತರ ಅದರಲ್ಲಿ ಈರುಳ್ಳಿ, ಲವಂಗ, ಚಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆ ಹಾಗೂ ಸಣ್ಣದಾಗಿ ತುಂಡು ಮಾಡಿರುವ ಮಶ್ರೂಮ್ ಅನ್ನು ಹಾಕಬೇಕು.
ಜೀರಿಗೆ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಬೇಕು.
ನಂತರ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
2 ಬಟ್ಟಲು ಬಿಸಿ ನೀರನ್ನು ಹಾಕಿ. ಈ ಮಿಶ್ರಣಕ್ಕೆ ಈರುಳ್ಳಿಯ ಹಸಿರು ಭಾಗ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಮುಚ್ಚಳ ಮುಚ್ಚಿ ಬೇಯಿಸಿದರೆ ಮಶ್ರೂಮ್ ಪಲಾವ್ ತಿನ್ನಲು ರೆಡಿಯಾಗಿರುತ್ತೆ.