ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಅಕ್ಕಿ ಹಿಟ್ಟು ಹಾಗೂ ಚಿರೋಟಿ ರವೆ ಹಾಕಿ ಚೆನ್ನಾಗಿ ಕೆಂಪಗೆ ಹುರಿದು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಬೇಕು. ಇದೇ ಬಾಣಲೆಯಲ್ಲಿ ತುರಿದ ಕಾಯಿ ತುರಿ ಹಾಕಿ ಕೆಂಪಗೆ ಹುರಿದುಕೊಳ್ಳಿ.
ನಂತರ ಇದಕ್ಕೆ ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದ. ಓಮ್ ಕಾಳು, ಜೀರಿಗೆ, ಕಾಳು ಮೆಣಸಿನ ಪುಡಿ ಹಾಕಿ ಬಿಸಿ ಮಾಡಿದ ಬೆಣ್ಣೆ ಹಾಕಿ ಇಂಗಿನ ಪುಡಿ, ತರಿಯಾದ ಕಡಲೆಕಾಯಿ ಬೀಜದ ಪುಡಿ, ಬೆಳ್ಳುಳ್ಳಿ ಪೇಸ್ಟ್, ಬಿಳಿ ಎಳ್ಳು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಎಲ್ಲವೂ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಸ್ವಲ್ಪ ನೀರು ಹಾಕಿ ಹದವಾಗಿ ಹಿಟ್ಟಿನಂತೆ ಕಲಸಿಕೊಳ್ಳಬೇಕು.
ಒಲೆಯ ಮೇಲೆ ಬಾಣಲೆಯಿಟ್ಟು ಕಾದ ನಂತರ ಅದಕ್ಕೆ ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಬೇಕು ನಂತರ ಕಲಸಿಟ್ಟುಕೊಂಡ ಕೋಡುಬಳೆ ಹಿಟ್ಟನ್ನು ಚಿಕ್ಕ ಚಿಕ್ಕ ಇಂಡೆಗಳನ್ನಾಗಿ ಮಾಡಿಕೊಂಡು ಕೈಯಿಗೆ ಎಣ್ಮೆ ಹಾಕಿ ಕೋಡುಬಳೆ ಆಕಾರ ಮಾಡಿಕೊಂಡು ಕಾದ ಎಣ್ಣೆಗೆ ಹಾಕಿ ಕೆಂಪಗೆ ಸುಟ್ಟರೆ. ರುಚಿಕರವಾದ ಖಾರ ಕೋಡುಬಳೆ ತಿನ್ನಲು ಸಿದ್ಧವಾಗುತ್ತದೆ.