ಬಾಣಲೆಗೆ 2 ಚಮಚ ತುಪ್ಪವನ್ನು ಹಾಕಿ ತುರಿದ ಅನಾನಸ್ ನ್ನು ಕೆಂಪಗೆ ಹುರಿದುಕೊಳ್ಳಬೇಕು. ನಂತರ ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು.
ಮತ್ತೊಂದು ಪಾತ್ರೆ ತೆಗೆದುಕೊಂಡು ಇದಕ್ಕೆ 2 ಬಟ್ಟಲು ಹಾಲು ಸೇರಿಸಿ ಚೆನ್ನಾಗಿ ಕುದಿಸಿಬೇಕು ಹಾಲು ಚೆನ್ನಾಗಿ ಕಾದ ನಂತರ ಇದಕ್ಕೆ ಸಕ್ಕರೆ ಹಾಗೂ ಅನಾನಸ್ ಸೇರಿಸಬೇಕು.
ನಂತರ ಉಳಿದ ಹಾಲು ಹಾಕಿ ಸ್ವಲ್ಪಹೊತ್ತು ಕಾಯಿಸಿ ನಂತರ ಇಳಿಸಿಕೊಳ್ಳಬೇಕು. ಕೊನೆಯಲ್ಲಿ ಉಳಿದ ತುಪ್ಪ, ದ್ರಾಕ್ಷಿ, ಗೋಡಂಬಿ ಹಾಗೂ ಕೇಸರಿ ದಳ ಸೇರಿಸಿದರೆ ಸಿಹಿಯಾದ ಅನಾನಸ್ ಪಾಯಸ ತಯಾರಾಗುತ್ತದೆ.