ಮೊದಲು ಕುಕ್ಕರಿನಲ್ಲಿ ಅಲಸಂದೆ ಕಾಳು, ಸ್ವಲ್ಪ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಕಾಳು ಬೆಂದ ನಂತರ ನೀರು ಮತ್ತು ಕಾಳು ಬೇರೆ ಮಾಡಬೇಕು.
ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಜೀರಿಗೆ, 10 ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಟೊಮೆಟೋವನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು.
ರುಬ್ಬಿಕೊಂಡದ್ದನ್ನೆಲ್ಲಾ ಕಾಳು ಬೇಯಿಸಿದ ನೀರಿಗೆ ಹಾಕಬೇಕು. ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ 3 ಈರುಳ್ಳಿ, ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿದರೆ ಹಸಿ ಗೊಜ್ಜು ತಯಾರಾಗುತ್ತದೆ.
ನಂತರ ಬೇಯಿಸಿಕೊಂಡ ಕಾಳಿನ ಒಗ್ಗರಣೆಗಾಗಿ ಒಲೆಯ ಮೇಲೆ ಬಾಣಲೆಯಿಟ್ಟು ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಬೇಕು. ಇದು ಕೆಂಪಗಾದ ನಂತರ ಈರುಳ್ಳಿ ಹಾಕಬೇಕು. ಈರುಳ್ಳಿ ಸ್ವಲ್ಪ ಬೇಯುತ್ತಿದ್ದಂತೆ ರುಬ್ಬಿ ಕೊಂಡ ಹಸಿಮೆಣಸಿನಕಾಯಿಯನ್ನು ಹಾಕಬೇಕು. ಎಲ್ಲವೂ ಬೆಂದ ನಂತರ ಬೇಯಿಸಿಕೊಂಡ ಕಾಳು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಕೊನೆಯಲ್ಲಿ ಕೊತ್ತಂಬರಿ ಮತ್ತು ಕಾಯಿತುರಿ ಹಾಕಿದರೆ. ರುಚಿಕರವಾದ ಅಲಸಂದೆ ಕಾಳಿನ ಹಸಿ ಗೊಜ್ಜು ತಯಾರಾಗುತ್ತದೆ.