ಸ್ಪೆಷಲ್ ಎಗ್ ಫ್ರೈ
ಸ್ಪೆಷಲ್ ಎಗ್ ಫ್ರೈ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಮೊಟ್ಟೆ 6
- ಈರುಳ್ಳಿ - 4
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಕರಿಬೇವು- ಸ್ವಲ್ಪ
- ಸಾಸಿವೆ - ಸ್ವಲ್ಪ
- ಕಡಲೆಪಪ್ಪು- 100 ಗ್ರಾಂ
- ಅಚ್ಚ ಖಾರದ ಪುಡಿ - 1 ಚಮಚ
- ಉಪ್ಪು - 1/2 ಚಮಚ
- ದನಿಯಾ ಪುಡಿ - 1/2 ಚಮಚ
- ಬೆಳ್ಳುಳ್ಳಿ - 5-7 ಎಸಳು
- ಎಣ್ಣೆ - ಸ್ವಲ್ಪ
ಮಾಡುವ ವಿಧಾನ...
- ಮೊದಲು ಮೊಟ್ಟೆಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬೇಯಿಸಿಕೊಂಡು. ನಂತರ ಮೊಟ್ಟೆಯನ್ನು ಬಿಡಿಸಿ ಒಂದು ಮೊಟ್ಟೆಯನ್ನು 6 ಭಾಗದಂತೆ ಎಲ್ಲಾ ಮೊಟ್ಟೆಯನ್ನು ಕತ್ತರಿಸಿ ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಬೇಕು.
- ಮಿಕ್ಸಿ ಜಾರ್ ತೆಗೆದುಕೊಂಡು ಇದಕ್ಕೆ ಕಡಲೆಪಪ್ಪು, ಖಾರದಪುಡಿ, ಬೆಳ್ಳುಳ್ಳಿ, ದನಿಯಾಪುಡಿ ಹಾಗೂ ಉಪ್ಪು ಹಾಕಿ ಇದನ್ನು ಪುಡಿ ಮಾಡಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಬೇಕು. ಇದು ಕೆಂಪಗಾದ ನಂತರ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿಯಬೇಕು.
- ನಂತರ ಇದಕ್ಕೆ ಪುಡಿ ಮಾಡಿಕೊಂಡ ಕಡಲೆಪಪ್ಪು ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 2 ನಿಮಿಷದ ನಂತರ ಬೇಯಿಸಿ ಕತ್ತರಿಸಿದ ಮೊಟ್ಟೆಯನ್ನು ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಎಗ್ ಫ್ರೈ ತಯಾರಾಗುತ್ತದೆ.
-ಮಂಜುಳ.ವಿ.ಎನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.