ಆಲೂ ಪನ್ನೀರ್ ಕೋಫ್ತಾ
ಆಲೂ ಪನ್ನೀರ್ ಕೋಫ್ತಾ ಮಾಡುವ ವಿಧಾನ...
ಕೋಫ್ತಾಗೆ ಬೇಕಾಗುವ ಪದಾರ್ಥಗಳು
- ಪನ್ನೀರ್ - 200 ಗ್ರಾಂ
- ಆಲೂಗಡ್ಡೆ - ಮೂರು (ಸಿಪ್ಪೆ ತೆಗೆದು ಬೇಯಿಸಿದ್ದು)
- ಬಾದಾಮಿ ಪುಡಿ - 1 ಚಮಚ
- ಕಾಳುಮೆಣಸಿನ ಪುಡಿ - ಅರ್ಧ ಚಮಚ
- ಗರಂ ಮಸಾಲಾ - ಅರ್ಧ ಚಮಚ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಮೆಕ್ಕೆ ಜೋಳದ ಹಿಟ್ಟು (Cornflour) - 2 ಚಮಚ
- ಡ್ರೈ ಫ್ರೂಟ್ಸ್ - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಷ್ಟು
- ಎಣ್ಣೆ - ಕರಿಯಲು
ಕರ್ರಿಗೆ ಬೇಕಾದ ಪದಾರ್ಥಗಳು
- ಜೀರಿಗೆ - 1 ಚಮಚ
- ಚಕ್ಕೆ (ದಾಲ್ಚಿನ್ನಿ) - ಸ್ವಲ್ಪ
- ಬೆಳ್ಳುಳ್ಳಿ ಪೇಸ್ಟ್ - 1 ಚಮಚ
- ಟೊಮೆಟೋ ಪ್ಯೂರಿ - 1 ಚಮಚ
- ಬಾದಾಮಿ ಪುಡಿ - 1 ಚಮಚ
- ಚಾಟ್ ಮಸಾಲಾ - 1 ಚಮಚ
- ಖಾರದ ಪುಡಿ - ಅರ್ಧ ಚಮಚ
- ಅರಿಶಿನ ಪುಡಿ - ಸ್ವಲ್ಪ
- ಗರಂ ಮಸಾಲಾ ಪುಡಿ - ಅರ್ಧ ಚಮಚ
- ಜೀರಿಗೆ ಪುಡಿ - ಅರ್ಧ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಎಣ್ಣೆ - 4 ಚಮಚ
ಆಲೂ ಪನ್ನೀರ್ ಕೋಫ್ತಾ ಮಾಡಲು ಮೊದಲು ಕೋಫ್ತಾ ತಯಾರು ಮಾಡಿಕೊಳ್ಳಬೇಕು...
ಕೋಫ್ತಾ ತಯಾರು ಮಾಡುವ ವಿಧಾನ...
- ತುರಿದ ಪನ್ನೀರ್, ಬಾದಾಮಿ ಪುಡಿ, ಕಾಳುಮೆಣಸಿನ ಪುಡಿ, ಗರಂ ಮಸಾಲಾ,ಕೊತ್ತಂಬರಿ ಸೊಪ್ಪು, ಮೆಕ್ಕೆ ಜೋಳದ ಹಿಟ್ಟು ಮತ್ತು ಉಪ್ಪು ಎಲ್ಲವನ್ನೂ ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಬೇಯಿಸಿದ ಆಲೂ ಸೇರಿಸಿ ಗಂಟುಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ.
- ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು. ಕೈಯಲ್ಲಿ ತಟ್ಟಿ ಚಿಕ್ಕ ರೊಟ್ಟಿಯಂತೆ ಮಾಡಿಕೊಳ್ಳಬೇಕು. ಇದರ ಮಧ್ಯೆ 1 ಚಮಚದಷ್ಟು ಡ್ರೈಫ್ರ್ಯೂಟ್ಸ್ ಹಾಕಿ. ಡ್ರೈಫ್ರೂಟ್ಸ್ ಹೊರ ಬರದಂತೆ ಎಲ್ಲಾ ಬದಿಗಳನ್ನು ಮುಚ್ಚಿ ಉಂಡೆ ಮಾಡಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಬೇಕು.
- ಎಣ್ಣೆ ಕಾದ ನಂತರ ಉಂಡೆ ಮಾಡಿಕೊಂಡ ಆಲೂ ಮಿಶ್ರಿತ ಉಂಡೆಯನ್ನು ಹಾಕಿ ಉಂಡೆ ಒಡೆಯದಂತೆ ಚಿನ್ನದ ಬಣ್ಣ ಬರುವವರೆಗೆ ಕರಿದರೆ ಕೋಫ್ತಾ ತಯಾರಾಗುತ್ತದೆ.
ನಂತರ ಕೋಫ್ತಾಗೆ ಕರ್ರಿ ತಯಾರು ಮಾಡಿಕೊಳ್ಳಬೇಕು...
- ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬಿಸಿ ಮಾಡಬೇಕು. ಇದಕ್ಕೆ ಜೀರಿಗೆ, ದಾಲ್ಚಿನ್ನಿ ಹಾಕಿ 1 ನಿಮಿಷ ಹುರಿಯಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನದ ಪುಡಿ, ಖಾರದ ಪುಡಿ, ಚಾಟ್ ಮಸಾಲಾ, ಮೆಣಸಿನ ಪುಡಿ, ಗರಂ ಮಸಾಲಾ ಪುಡಿಗಳನ್ನು ಹಾಕಿ 5 ನಿಮಿಷ ಹುರಿಯಬೇಕು.
- ನಂತರ ಟೊಮೆಟೋ ಪ್ಯೂರಿ ಹಾಕಿ ತಳ ಹಿಡಿದಂತೆ 2 ನಿಮಿಷ ಹುರಿದುಕೊಳ್ಳಬೇಕು.
- ಬಾದಾಮಿ ಪುಡಿ ಉಪ್ಪು ಹಾಕಿ ಎರಡು ನಿಮಿಷ ಹುರಿದುಕೊಳ್ಳಬೇಕು.
- ಈಗ ಸ್ವಲ್ಪ ನೀರು ಹಾಕಿ ಸ್ವಲ್ಪ ಹೊತ್ತು ಕೈಯಾಡಿಸಬೇಕು. ನಂತರ ಎಣ್ಣೆಯಲ್ಲಿ ಕರಿದ ಕೋಫ್ತಾಗಳನ್ನು ಹಾಕಬೇಕು. ಕೋಫ್ತಾ ಒಡೆಯದಂತೆ ನಿಧಾನವಾಗಿ ಕೈಯಾಡಿಸಬೇಕು. ನಂತರ ಕರಿ ಕುದಿಯಲು ಬಿಡಬೇಕು.
- ಕುದಿ ಬರುತ್ತಿದ್ದಂತೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಹಾಕಿದರೆ ಆಲೂ ಪನ್ನೀರ್ ಕೋಫ್ತಾ ತಯಾರಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.